ಲಕ್ನೋ, ಸೆ. 07 (DaijiworldNews/PY): "ವಿಧಾನಸಭಾ ಭವನದಲ್ಲಿ ನಮಾಜ್ ಮಾಡಲು ಸ್ಥಳಾವಕಾಶ ಮಾಡಿಕೊಡಬೇಕು" ಎಂದು ಸಮಾಜವಾದಿ ಪಕ್ಷದ ಕಾನ್ಪುರ್ ಸೀಸಮಾವು ಕ್ಷೇತ್ರದ ಶಾಸಕ ಇರ್ಫಾನ್ ಸೋಲಂಕಿ ಹೇಳಿದ್ದಾರೆ.
"15 ವರ್ಷದಿಂದ ನಾನು ಶಾಸಕನಾಗಿದ್ದೇನೆ. ವಿಧಾನಸಭೆ ಕಲಾಪಗಳು ನಡೆಯುವ ವೇಳೆ ಮುಸ್ಲಿಂ ಶಾಸಕರು ನಮಾಜ್ ಮಾಡುವ ಸಲುವಾಗಿ ಕಲಾಪ ಮೊಟಕುಗೊಳಿಸಿ ನಮಾಜ್ಗೆ ಹೋಗಬೇಕಾಗುತ್ತದೆ. ಹಾಗಾಗಿ ವಿಧಾನಭವನದಲ್ಲೇ ನಮಗೆ ನಮಾಜ್ ಮಾಡಲು ಸ್ಥಳಾವಕಾಶ ನೀಡಿ. ಇದರಿಂದ ನಮಗೆ ಅನುಕೂಲ ಆಗುತ್ತದೆ" ಎಂದು ಸ್ಪೀಕರ್ನಲ್ಲಿ ಮನವಿ ಮಾಡಿದ್ದಾರೆ.
"ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ನಮಾಜ್ ಮಾಡಲು ಅವಕಾಶ ನೀಡಲಾಗಿದೆ. ನಮ್ಮ ಮನವಿಯನ್ನು ಸ್ಪೀಕರ್ ಪರಿಗಣಿಸಿದರೆ ಇದರಿಂದ ಯಾರಿಗೂ ಹಾನಿ ಇಲ್ಲ" ಎಂದಿದ್ದಾರೆ.
ಮುಸ್ಲಿಂ ಶಾಸಕರಿಗೆ ಜಾರ್ಖಂಡ್ ವಿಧಾನಸಭೆ ಸ್ಪೀಕರ್, ವಿಧಾನಸಭೆ ಕಟ್ಟಡದಲ್ಲಿ ನಮಾಜ್ ಮಾಡಲು ಸ್ಥಳಾವಕಾಶ ಮಾಡಿಕೊಟ್ಟು ಸೆ.2ರಂದು ಆದೇಶ ನೀಡಿದ್ದರು. ಇದನ್ನು ಆಡಳಿತರೂಢ ಜೆಎಂಎಂ ಹಾಗೂ ಸ್ವಾಗತಿಸಿದ್ದರೆ, ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.
"ಮುಸ್ಲಿಂ ಶಾಸಕರಿಗೆ ನಮಾಜ್ ಮಾಡಲು ಸ್ಥಳಾವಕಾಶ ನೀಡಿದರೆ, ಹಿಂದೂ ಶಾಸಕರಿಗೆ ಪ್ರಾರ್ಥನೆ ಮಾಡಲು ವಿಧಾನಸಭೆ ಕಟ್ಟದಲ್ಲಿ ದೇವಸ್ಥಾನ ನಿರ್ಮಾಣ ಮಾಡಿಕೊಡಿ" ಎಂದು ಬಿಜೆಪಿ ಶಾಸಕರೋರ್ವರು ಹೇಳಿದ್ದರು.