ಬೆಂಗಳೂರು, ಸೆ. 07 (DaijiworldNews/PY): "ನಿಫಾ ಸೋಂಕು ನಮ್ಮ ರಾಜ್ಯದಲ್ಲಿ ಕಾಣಿಸಿಕೊಂಡಿಲ್ಲ. ನಿಫಾ ಸೋಂಕಿಗೆ ಲಸಿಕೆ,, ಚಿಕಿತ್ಸೆ ಇಲ್ಲ. ರೋಗದ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ಕೊಡುತ್ತೇವೆ" ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಿಫಾ ಸೋಂಕಿಗೆ ಕೇರಳದಲ್ಲಿ ಮಗುವೊಂದು ಸಾವನ್ನಪ್ಪಿದೆ. ಸೋಂಕಿತರ ಮೇಲೆ ಅಲ್ಲಿನ ಸರ್ಕಾರ ನಿಗಾ ವಹಿಸಿದೆ. ನಿಫಾ ತಡೆಗೆ ಕೇರಳ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನಮಗೆ ಸಮಾಧಾನವಿದೆ" ಎಂದಿದ್ದಾರೆ.
"ನಿಫಾ ಸೋಂಕು ಬಗ್ಗೆ ರಾಜ್ಯದ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಂಭೀರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ ನಿಫಾ ತಡೆಗೆ ಎಲ್ಲಾ ರೀತಿಯಾದ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
1-5ನೇ ತರಗತಿಗಳ ಪ್ರಾರಂಭದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "6-8ನೇ ತರಗತಿಗಳು ಈಗಷ್ಟೇ ಆರಂಭವಾಗಿವೆ. ಎಷ್ಟೋ ಪೋಷಕರು ಇನ್ನೂ ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ. ಸ್ವಲ್ಪ ದಿನ ಕಾದು ನೋಡೋಣ" ಎಂದು ಹೇಳಿದ್ದಾರೆ.