ಬೆಂಗಳೂರು, ಸೆ. 07 (DaijiworldNews/PY): "ಮೂರು ಪಾಲಿಕೆ ಚುನಾವಣೆಯ ಫಲಿತಾಂಶ ಯಾವುದೇ ದಿಕ್ಸೂಚಿಯಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನು ಮೊದಲು ನೋಡಿಕೊಳ್ಳಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೂರು ಪಾಲಿಕೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ತಿಳಿಸಿದ್ದೀರಿ. ಬಿಬಿಎಂಪಿ ಚುನಾವಣೆ ನಡೆಸಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ನಡೆಸಿ ಏಕೆ ಚುನಾವಣೆಗಳನ್ನು ಮುಂದೂಡಿದ್ದೀರಿ ಎಂದು ಕೇಳಿದ್ದೀರಿ ಅಲ್ಲವೇ?. ಕಾಂಗ್ರೆಸ್ ಪಕ್ಷದ ಶಕ್ತಿ ಏನು ಎಂದು ಈ ಚುನಾವಣೆಗಳಲ್ಲಿ ತಿಳಿಯುತ್ತದೆ" ಎಂದಿದ್ದಾರೆ.
"ಕಾರ್ಪೋರೇಷನ್ ಚುನಾವಣೆ ತೃಪ್ತಿ ತಂದಿದೆ. ನಾವು ಕಲಬುರ್ಗಿಯಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಹುಬ್ಬಳ್ಳಿಯಲ್ಲಿ ಸ್ಥಾನ ಗೆದ್ದಿದ್ದೇವೆ. ತರಿಕೆರೆಯಲ್ಲೂ ನಾವು ಗೆದ್ದಿದ್ದೇವೆ" ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯ ಸಿದ್ದರಾಮಯ್ಯ ಹಾಗೂ ತಾವು ಬೇರೆ ಬೇರೆ ಬಣ ಎಂದು ಹೇಳಿದ ವಿಚಾರವಾಗಿ ಕಿಡಿಕಾರಿದ ಅವರು, "ಇದು ಮಾಧ್ಯಮಗಳ ಸೃಷ್ಟಿ. ನಮ್ಮದು ಒಂದೇ ಬಣ ಅದು ಕಾಂಗ್ರೆಸ್ ಬಣ" ಎಂದಿದ್ದಾರೆ.