ಬೆಂಗಳೂರು, ಸೆ 07 (DaijiworldNews/MS): "ಹೆಚ್ಚಿನ ಬಿಲ್ಗಳು ರಾಜ್ಯದ ಸರ್ಕಾರಿ ಕಚೇರಿಗಳೇ ಬಾಕಿ ಉಳಿಸಿಕೊಂಡಿದ್ದು ಇದು ಸರ್ಕಾರಕ್ಕೆ ಹೊರೆಯಾಗಿದೆ. ಹಾಗಾಗಿ, ವಿದ್ಯುತ್ ಬಳಸುವ ಎಲ್ಲರಿಗೂ ನಿಗದಿತವಾಗಿ ಬಿಲ್ ಪಾವತಿಸುವುದು ಕೂಡಾ ಅನ್ವಯಿಸಲಾಗುವುದು" ಎಂದು ಸುನೀಲ್ ಕುಮಾರ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಎರಡು ಇಲಾಖೆಗಳ ಬಗ್ಗೆಯೂ ಒಂದಷ್ಟು ಹೊಸ ಯೋಚನೆ ಬಂದಿದ್ದು ಎಲ್ಲಾ ವಿಭಾಗಗಳಲ್ಲಿ ತಯಾರು ಮಾಡಲು ಸಲಹೆ ನೀಡಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಲ್ಲಾ ಮನೆಗಳಿಗೆ ವಿದ್ಯುತ್ ಒದಗಿಸುವ ಬೆಳಕು ಯೋಜನೆಯಡಿ, ಸ್ಥಳೀಯ ಸಂಸ್ಥೆಗಳಿಂದ ಎನ್ ಓ ಸಿ ಅಗತ್ಯವಿಲ್ಲ ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ಡಿವಿಜನಲ್ ಗಳಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಮಾಡಲು ತೀರ್ಮಾನಿಸಲಾಗಿದ್ದು. ಟಿಸಿ ಸುಟ್ಟರೆ 24 ಗಂಟೆಯಲ್ಲಿ ರಿಪೇರಿ ಮಾಡಲಾಗುವುದು, ಗಂಗಾ ಕಲ್ಯಾಣದ ಯೋಜನೆಗಳಿಗೆ 30 ದಿನದಲ್ಲಿ ಸಂಪರ್ಕ ನೀಡಲು ಸೂಚಿಸಲಾಗಿದೆ, ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಡ್ ಮೀಟರ್ ಅಳವಡಿಕೆಗೆ ತೀರ್ಮಾನಿಸಲಾಗಿದೆ ಎಂದರು.
ಉತ್ತರ ಕರ್ನಾಕಟದ ಜಿಲ್ಲೆಗಳಲ್ಲಿ 7 ಗಂಟೆ ನಿರಂತರ ವಿದ್ಯುತ್ ನೀಡಲು ತೀರ್ಮಾನಿಸಿದೆ. ಅದಕ್ಕಾಗಿ 60ಕ್ಕೂ ಹೆಚ್ಚು ಸಬ್ ಸ್ಟೇಶನ್ ಮಾಡಲು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು
ಇನ್ನು ರಾಜ್ಯದಲ್ಲಿ ಹೊಸ ನೇಮಕಾತಿಗಳ ಬಗ್ಗೆ ಸಾಕಷ್ಟು ಬೇಡಿಕೆ ದೂರು ಬಂದಿದ್ದು ಲೈನ್ ಮೆನ್, ಜೆಇ ನೇಮಕದ ಬಗ್ಗೆ ಬೇಡಿಕೆ ಇದೆ . ವರ್ಗಾವಣೆ ದಂಧೆಯನ್ನು ವರ್ಷಪೂರ್ತಿ ನಡೆಸುವುದನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.