ಕೋಯಿಕ್ಕೋಡ್ , ಸೆ 07 (DaijiworldNews/MS): ನಿಫಾ ವೈರಾಸ್ ಸೋಂಕಿಗೆ ತುತ್ತಾಗಿ ಮೃತಪಟ್ಟ 12 ವರ್ಷದ ಬಾಲಕನ ನಿಕಟ ಸಂಪರ್ಕದಲ್ಲಿದ್ದವರ ಪರೀಕ್ಷಾ ವರದಿ ಮಂಗಳವಾರ ಬಂದಿದ್ದು ನೆಗೆಟಿವ್ ಬಂದಿದ್ದು ಆರೋಗ್ಯ ಅಧಿಕಾರಿಗಳು ರಂಬುಟನ್ ಹಣ್ಣಿನಿಂದ ಸೋಂಕು ಹರಡಿರುವ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಮೃತ ಬಾಲಕನ ನಿಕಟ ಸಂಪರ್ಕದಲ್ಲಿದ್ದವರ ಪರೀಕ್ಷಾ ವರದಿ ನೆಗೆಟಿವ್ ಇರುವುದರಿಂದ ಕೇರಳದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಏತನ್ಮಧ್ಯೆ, ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಾ,ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಬಾಲಕನ ಪೋಷಕರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಬಾಲಕನ ನಿಕಟ ಸಂಪರ್ಕಕ್ಕೆ ಬಂದ 8 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇವರಲ್ಲಿ ಸೋಂಕಿನ ಲಕ್ಷಣಗಳೂ ಇದ್ದವು. ಆದರೆ, ಪರೀಕ್ಷೆ ವರದಿಯು ನೆಗೆಟಿವ್ ಬಂದಿದೆ. ಇದರಿಂದ ಸ್ವಲ್ಪ ಮಟ್ಟಿನ ಸಮಾಧಾನವಾಗಿದೆ' ಎಂದರು.
ಸಾಂಕ್ರಾಮಿಕ ರೋಗವು ವರದಿಯಾಗಿರುವುದರಿಂದ ಜಿಲ್ಲೆಯು ನಿರ್ದಿಷ್ಟವಾಗಿ ನಿಗಾ ವಹಿಸಲಾಗಿದೆ ಎಂದು ಹೇಳಿದರು. ಪ್ರಕರಣ ವರದಿಯಾದ ಪ್ರದೇಶದಲ್ಲಿ ವಿಶೇಷ ತಡೆಗಟ್ಟುವ ಕ್ರಮಗಳನ್ನು ಆರಂಭಿಸಲಾಗಿದೆ.
'ಪ್ರಸ್ತುತ 48 ಮಂದಿಗೆ ಸೋಂಕು ತಗುಲುವ ಸಾಧ್ಯತೆ ಅತಿ ಹೆಚ್ಚಿದ್ದು, ಅವರನ್ನು ವೈದ್ಯಕೀಯ ಕಾಲೇಜಿನ ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇನ್ನೂ, ಐದು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ' ಎಂದು ಅವರು ಮಾಹಿತಿ ನೀಡಿದರು.
ಈ 48 ಮಂದಿಯಲ್ಲಿ ಕೋಯಿಕ್ಕೋಡ್ (31), ವಯನಾಡ್ (4), ಮಲಪ್ಪುರಂ(8), ಕಣ್ಣೂರು(3), ಪಾಲಕ್ಕಾಡ್ (1), ಎರ್ನಾಕುಲಂ(1) ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.'ಮಂಗಳವಾರ ಇನ್ನಷ್ಟು ಮಾದರಿಗಳನ್ನು ಪರೀಕ್ಷಿಸಲಾಗುವುದು' ಎಂದು ವೀಣಾ ಜಾರ್ಜ್ ತಿಳಿಸಿದರು.
ನಿಫಾದ ಹಿಂದಿನ ಅನುಭವ ಮತ್ತು ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಗೆ ಸಂಬಂಧಿಸಿದ ಪ್ರೋಟೋಕಾಲ್ಗಳು ಕ್ರಮಗಳ ಅನುಷ್ಠಾನವನ್ನು ಸುಲಭಗೊಳಿಸುತ್ತದೆ. ಮೃತರ ಪ್ರಾಥಮಿಕ ಸಂಪರ್ಕಗಳಲ್ಲಿ ಎಂಟು ಮಂದಿ ನಿಫಾ ನೆಗೆಟಿವ್ ಆಗಿರುವುದು ಸಮಾಧಾನಕರವಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು. ಆದಾಗ್ಯೂ, ಸೋಂಕಿನ ನಿಖರವಾದ ಮೂಲವನ್ನು ಗುರುತಿಸುವವರೆಗೂ ನಾವು ಎಚ್ಚರಿಕೆ ವಹಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.