ನವದೆಹಲಿ,ಸೆ 07 (DaijiworldNews/MS): ಸೆ. 9ರಂದು ನಡೆಯಲಿರುವ ವರ್ಚುವಲ್ 13ನೇ ಬ್ರಿಕ್ಸ್ ರಾಷ್ಟ್ರಗಳ(ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಶೃಂಗಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ.
2012 ಮತ್ತು 2016 ರ ನಂತರ ಭಾರತವು ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ ಈ .
ಸಭೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ; ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ, ಸಿರಿಲ್ ರಾಮಫೋಸಾ ಭಾಗವಹಿಸಲಿದ್ದಾರೆ
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ನ್ಯೂ ಡೆವಲಮೆಂಟ್ ಬ್ಯಾಂಕ್ ಅಧ್ಯಕ್ಷ ಮಾರ್ಕೊಸ್ ಟ್ರಾಯ್ಜೊ, ಬ್ರಿಕ್ಸ್ ಉದ್ಯಮ ಮಂಡಳಿ ಅಧ್ಯಕ್ಷ ಓಂಕಾರ್ ಕನ್ವರ್, ಬ್ರಿಕ್ಸ್ ಮಹಿಳಾ ಉದ್ಯಮ ಮೈತ್ರಿ ಅಧ್ಯಕ್ಷೆ ಸಂಗೀತಾ ರೆಡ್ಡಿ ಶೃಂಗಸಭೆಯಲ್ಲಿ ಈ ವರ್ಷಕ್ಕೆ ಸಂಬಂಧಿಸಿದ ಪ್ರಗತಿಯ ವಿವರಗಳನ್ನು ಮಂಡಿಸಲಿದ್ದಾರೆ.
ಪ್ರಧಾನಿ ಮೋದಿ ಅಧ್ಯಕ್ಷತೆ ವಹಿಸುತ್ತಿರುವುದು ಎರಡನೇ ಸಾರಿಯಾಗಿದೆ. ಇದಕ್ಕೂ ಮೊದಲು 2016ರಲ್ಲಿ ಗೋವಾದಲ್ಲಿ ನಡೆದ ಶೃಂಗಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು.