ಇಂದೋರ್, ಸೆ. 07 (DaijiworldNews/PY): ಆರ್ಎಸ್ ನಾಯಕ ಡಾ.ಕೇಶವ್ ಹೆಡ್ಗೆವಾರ್ ಹಾಗೂ ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಬಗ್ಗೆ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬೋಧಿಸುವ ಬಿಜೆಪಿ ಸರ್ಕಾರ ತೀರ್ಮಾನವನ್ನು ಖಂಡಿಸಿರುವ ಕಾಂಗ್ರೆಸ್, "ಬಿಜೆಪಿಯವರು ಆರ್ಎಸ್ಎಸ್ನ ಸಿದ್ಧಾಂತವನ್ನು ಹೇರಲು ದೇಶವನ್ನು ವಿಭಜಿಸಬಹುದು" ಎಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ವರ್ಮಾ, "ವೈದ್ಯರು ಆಪರೇಷನ್ ಟೇಬಲ್ ಮೇಲೆ ಇದೀಗ ಹೆಡ್ಗೆವಾರ್ ಹಾಗೂ ಉಪಾಧ್ಯಾಯ ಅವರ ಪುಸ್ತಕಗಳನ್ನು ಇಟ್ಟುಕೊಂಡು ಆಪರೇಷನ್ ಮಾಡಲಿದ್ದಾರೆ" ಎಂದು ಟೀಕಿಸಿದ್ದಾರೆ.
ವ್ಯಾಪಂ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ವೈದ್ಯರನ್ನು ದೇಶದ ಜನತೆ ದೇವರೆಂದು ಭಾವಿಸುತ್ತಾರೆ. ಆದರೆ, ಮಧ್ಯಪ್ರದೇಶದಲ್ಲಿನ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ದೆವ್ವಗಳನ್ನಾಗಿಸಿದೆ" ಎಂದಿದ್ದಾರೆ.
"ಇನ್ನು ಮುಂದೆ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಆರ್ಎಸ್ಎಸ್ ಸಂಸ್ಥಾಪಕ ಡಾ.ಕೇಶವ ಹೆಡ್ಗೆವಾರ್ ಹಾಗೂ ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಬಗ್ಗೆ ಬೋಧಿಸಲಾಗುವುದು" ಎಂದು ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ ಸಾರಂಗ್ ಘೋಷಣೆ ಮಾಡಿದ್ದರು.