ನವದೆಹಲಿ, ಸ .06 (DaijiworldNews/HR): ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್ ) ಅನ್ನು ಖ್ಯಾತ ಸಾಹಿತಿ, ಚಿತ್ರ ಕಥೆಗಾರ ಜಾವೇದ್ ಅಖ್ತರ್ ಅವರು ತಾಲಿಬಾನ್ಗೆ ಹೋಲಿಕೆ ಮಾಡಿರುವುದು ಸಂಪೂರ್ಣವಾಗಿ ತಪ್ಪು ಎಂದು ಮಹಾರಾಷ್ಟ್ರದಲ್ಲಿ ಎನ್ಸಿಪಿ ಹಾಗೂ ಶಿವಸೇನೆ ತಿಳಿಸಿದೆ.
ಈ ಕುರಿತು ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿದದು, "ಹಿಂದೂ ರಾಷ್ಟ್ರದ ಕಲ್ಪನೆಯನ್ನು ನೀವು(ಅಖ್ತರ್) ಹೇಗೆ ತಾಲಿಬಾನ್ ಮನಸ್ಥಿತಿಗೆ ಹೋಲಿಸುತ್ತೀರಿ? ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಹೇಳಿದೆ.
ಇನನು ಹಿಂದುತ್ವದ ಹೆಸರಿನಲ್ಲಿನ ಹುಚ್ಚತನವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಕೆ ಮಾಡಿರುವುದು ಹಿಂದೂ ಸಂಸ್ಕೃತಿಯನ್ನು ಅಗೌರವಿಸಿದಂತೆ" ಎಂದಿದೆ.
ಇತ್ತೀಚೆಗೆ ಜಾವೇದ್ ಅಖ್ತರ್ ಅವರು ಸಂದರ್ಶನವೊಂದರಲ್ಲಿ, ಬಲಪಂಥೀಯ ಸಂಘಟನೆಯು ಕೂಡಾ ತಾಲಿಬಾನ್ ರೀತಿ ಇಸ್ಲಾಮಿಕ್ ದೇಶವನ್ನು ಹೊಂದುವ ಮನಸ್ಥಿತಿಯಂತೆ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತಿದೆ ಎಂದು ಹೇಳಿದ್ದರು.