ಬೆಂಗಳೂರು, ಸ .06 (DaijiworldNews/HR): ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಒಂದೇ ತಿಂಗಳಲ್ಲಿ ಸಿಕ್ಸರ್ ಹೊಡೆದಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಪಾಲಿಕೆ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ ನಿರಾಣಿ, "ಬೆಳಗಾವಿ ಮತ್ತು ಹುಬ್ಬಳ್ಳಿ ಮಹಾನಗರ ಫಲಿತಾಂಶ ಸಂಪೂರ್ಣ ಬಹುಮತ ಬಂದಿದ್ದು, ಕಲಬುರ್ಗಿಯಲ್ಲಿ 23 ಸ್ಥಾನ ಬಿಜೆಪಿ ಗೆದ್ದಿದೆ. ಸಂಸದರು ಹಾಗೂ ಶಾಸಕರು ಇರುವುದರಿಂದ ಮೊದಲ ಬಾರಿಗೆ ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ" ಎಂದರು.
ರಾಜ್ಯದಲ್ಲಿ ಯಡಿಯೂರಪ್ಪ ಅವರ ಮಾರ್ಗದರ್ಶನ, ಬೊಮ್ಮಾಯಿ ನಾಯಕತ್ವ ಕೇಂದ್ರದ ಮೋದಿ ನಾಯಕತ್ವದ ಬಗ್ಗೆ ರಾಜ್ಯದ ಜನರು ವಿಶ್ವಾಸ ಇಟ್ಟು ಬೆಂಬಲ ನೀಡಿದ್ದಾರೆ. ಮುಂಬರುವ ಎರಡು ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ ಎಂದರು.
ಇನ್ನು "ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಾಗಿಲ್ಲ. ಯಡಿಯೂರಪ್ಪ ನಮ್ಮ ನಾಯಕರು ಅವರ ಮಾರ್ಗದರ್ಶನದಲ್ಲಿಯೆ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಚುನಾವಣೆ ಪ್ರಚಾರದಲ್ಲಿ ಪಾಲ್ಗಳ್ಳದಿದ್ದರೂ ನಾವು ಎರಡನೇ ಹಂತದ ನಾಯಕರು ಪ್ರಚಾರ ಮಾಡಿ ಗೆದ್ದಿದ್ಸೇವೆ" ಎಂದು ಹೇಳಿದ್ದಾರೆ.