ಬೆಂಗಳೂರು, ಸೆ 06 (DaijiworldNews/MS): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ರಾಜ್ಯ ಬಿಜೆಪಿ ಘಟಕ ಲೇವಡಿ ಮಾಡಿದ್ದು "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆ ಸಮನ್ವಯ ಸಾಧಿಸಲು ನಿಮ್ಮಿಂದ ಸಾಧ್ಯವಾದ ವಿಫಲಾಧ್ಯಕ್ಷ" ಎಂದು ಕುಟುಕಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಘಟಕವೂ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದು, , ಮಾನ್ಯ ಐಎನ್ ಸಿ ಕರ್ನಾಟಕದ ಭ್ರಷ್ಟ ಅಧ್ಯಕ್ಷರೇ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಸಮನ್ವಯ ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ, ಒಬ್ಬ ವ್ಯಕ್ತಿಯ ಜತೆಗೆ ಒಮ್ಮತ ಸಾಧ್ಯವಾಗದೇ ಇರುವಾಗ ಇನ್ನು ಉಳಿದ ಹಿರಿಯ ನಾಯಕರ ಜೊತೆಗೆ ಹೇಗೆ ಹೆಜ್ಜೆ ಹಾಕುತ್ತೀರಿ ಡಿಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದೆ.
ಇದು ಖಾಲಿ ಜಾಗಕ್ಕೆ ಬೇಲಿ ಹಾಕುವಷ್ಟು ಸುಲಭದ ಮಾತಲ್ಲ ಎಂಬುದು ಡಿಕೆ ಶಿವಕುಮಾರ್ ಅವರಿಗೆ ಅರ್ಥವಾಗಿರಬೇಕು. ಸಮನ್ವಯ ಸಾಧಿಸುವುದು ಸುಲಭದ ಮಾತೇ? ವಿಫಲಾಧ್ಯಕ್ಷ ಡಿಕೆ ಶಿವಕುಮಾರ್ ಎಂದು ಬಿಜೆಪಿ ಲೇವಡಿ ಮಾಡಿದೆ.