ಗೋರಖ್ಪುರ, ಸೆ. 06 (DaijiworldNews/PY): "ಉತ್ತರ ಪ್ರದೇಶವು ಅಭಿವೃದ್ಧಿಯ ಹೊಸ ಕಥೆ ಬರೆಯುತ್ತಿದೆ" ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಗೋರಖ್ಪುರದಲ್ಲಿ ಮಾತನಾಡಿದ ಅವರು, "ಒಂದು ಕಾಲದಲ್ಲಿ ಪೂರ್ವ ಉತ್ತರ ಪ್ರದೇಶವು ಮಾಫಿಯಾ ಕೇಂದ್ರವಾಗಿತ್ತು. ಈ ಪ್ರದೇಶದಲ್ಲಿ ಡೆಂಗ್ಯೂ, ಎನ್ಸೆಫಲೈಟಿಸ್ ಹಾಗೂ ಮಲೇರಿಯಾ ಪ್ರಕರಣಗಳು ಹೆಚ್ಚಾಗಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ರಾಜ್ಯವು ಇವೆಲ್ಲವನ್ನೂ ತೊಡೆದುಹಾಕುತ್ತಿದೆ" ಎಂದಿದ್ದಾರೆ.
"ಸುರಕ್ಷತಾ ಹಾಗೂ ಇತರ ಕ್ರಮಗಳನ್ನು ಕೈಗೊಳ್ಳುವುದರಿಂದ ಎನ್ಸೆಫಲೈಟಿಸ್ ಅನ್ನು ರಾಜ್ಯದಲ್ಲಿ ನಿಯಂತ್ರಿಸಬಹುದು. ಪ್ರತಿಯೊಂದು ಮನೆಯಲ್ಲೂ ಕೂಡಾ ಶೌಚಾಲಯದೊಂದಿಗೆ ಎನ್ಸೆಫಲೈಟಿಸ್ ಕನಿಷ್ಠ ಮಟ್ಟಕ್ಕೆ ಇಳಿದಿದೆ" ಎಂದು ತಿಳಿಸಿದ್ದಾರೆ.
"ದೇಶದ 2ನೇ ರಾಷ್ಟ್ರಪತಿಯಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ನೈರ್ಮಕ್ಯೀಕರಣ ಆರಂಭವಾಗಿದ್ದು, ಇದು ಸೆ.12ರವರೆಗೆ ಮುಂದುವರಿಯುತ್ತದೆ" ಎಂದು ಹೇಳಿದ್ದಾರೆ.
ಈ ವೇಳೆ ಕೌದಿರಾಮ್, ಗೋಲಾ, ಸದರ್ ತಹಸಿಲ್, ಬೆಳ್ವಾರ್ ಪ್ರದೇಶಗಳಲ್ಲಿ ಪ್ರವಾಹ ಸಂತ್ರಸ್ತನ್ನು ಭೇಟಿ ಮಾಡಿದ್ದು, ಪರಿಹಾರ ಸಾಮಾಗ್ರಿಗಳನ್ನು ವಿತರಿಸಿದರು. ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಪದಕ ಗೆದ್ದ ಸುಹಾಸ್ ಎಲ್.ವೈ. ಅವರನ್ನು ಅಭಿನಂದಿಸಿದರು.