ಬೆಂಗಳೂರು,ಸೆ. 05 (DaijiworldNews/SM): ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ಕಾಲೇಜುಗಳನ್ನು ಆರಂಭಿಸಲಾಗಿದೆ. ಇದೀಗ 6ರಿಂದ 8ನೇ ತರಗತಿಗಳನ್ನು ಆರಂಭಿಸಲು ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಸೆಪ್ಟೆಂಬರ್ 6ರ ಸೋಮವಾರದಂದು ರಾಜ್ಯದಲ್ಲಿ ತರಗತಿಗಳು ಆರಂಭಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದೆ. ಸರಕಾರದ ಮುಂದೆ ಸಾಲು ಸಾಲು ಸವಾಲುಗಳಿವೆ. ಪೋಷಕರು ಹಾಗೂ ಶಿಕ್ಷಕರು ಹಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಸುಮಾರು ಎಂಟು ತಿಂಗಳ ಬಳಿಕ ತರಗತಿಗಳು ತೆರೆದುಕೊಳ್ಳುತ್ತಿದೆ. ಮಧ್ಯಾಹ್ನ ೧.೩೦ರ ತನಕ ಮಾತ್ರ ತರಗತಿಗಳು ನಡೆಯಲಿದೆ. ಸೋಮವಾರದಿಂದ ಶುಕ್ರವಾರದ ತನಕ ತರಗತಿಗಳು ನಡೆಯಲಿದ್ದು, ಶನಿವಾರ ಹಾಗೂ ರವಿವಾರದಂದು ತರಗತಿಗಳನ್ನು ಸ್ವಚ್ಛಗೊಳಿಸಲು ಅವಕಾಶವಿದೆ. ಇನ್ನು ಶೇ. ೫೦ ರಷ್ಟು ವಿದ್ಯಾರ್ಥಿಗಳು ಮಾತ್ರ ಏಕಕಾಲದಲ್ಲಿ ತರಗತಿಗಳಿಗೆ ಹಾಜರಾಗಲಷ್ಟೇ ಅವಕಾಶ ನೀಡಿದೆ.