ರಾಯಪುರ, ಸ.05 (DaijiworldNews/HR): ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಅವರು ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕಾಗಿ ರಾಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್
ಸರ್ವ ಬ್ರಾಹ್ಮಣ ಸಮಾಜ ನೀಡಿದ ದೂರಿನ ಆಧಾರದ ಮೇರೆಗೆ ನಂದ ಕುಮಾರ್ (75) ಅವರ ವಿರುದ್ಧ ಡಿ.ಡಿ. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ರಾಹ್ಮಣರು ವಿದೇಶಿಯರು. ಹೀಗಾಗಿ, ಬ್ರಾಹ್ಮಣರನ್ನು ಬಹಿಷ್ಕರಿಸಬೇಕು. ಹಳ್ಳಿಗಳಲ್ಲಿಯೂ ಅವರಿಗೆ ಪ್ರವೇಶ ನೀಡಬಾರದು’ ಎಂದು ನಂದಕುಮಾರ್ ಜನರಿಗೆ ಕರೆ ನೀಡಿದ್ದಾರೆ ಎಂದು ಸರ್ವ ಬ್ರಾಹ್ಮಣ ಸಮಾಜ ದೂರಿದೆ.
ಇನ್ನು ಭಗವಾನ್ ರಾಮನ ಬಗ್ಗೆಯೂ ನಂದಹಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಈ ಸಂಘಟನೆ ಆರೋಪಿಸಿದೆ ಎನ್ನಲಾಗಿದೆ.