ಶಿವಮೊಗ್ಗ, ಸ.05 (DaijiworldNews/HR): ದೊಡ್ಡ ಸಮಾಜದ ನಾಯಕರಾಗಬೇಕು ಎಂಬ ಆಸೆ ಕೆಲವು ಜನರಿಗೆ ಇರುತ್ತದೆ. ಅದರಂತೆ ಎಂ.ಬಿ.ಪಾಟೀಲ್ ಆ ಕನಸನ್ನು ಕಾಣುತ್ತಿದ್ದಾರೆ. ಹಿಂದೊಮ್ಮೆ ಹೀಗೆ ಮಾಡಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಂ.ಬಿ.ಪಾಟೀಲ್ ನನಗೆ ಆತ್ಮೀಯರಿದ್ದಾರೆ. ಜೊತೆಗೆ ಯುವಕರು ಕೂಡ. ಧರ್ಮ ಹಾಗೂ ಜಾತಿಯ ವಿಚಾರ ಬಹಳ ಸೂಕ್ಷ್ಮವಾದದ್ದು. ಆ ವಿಚಾರ ಬಂದಾಗ ಬಹಳ ಎಚ್ಚರಿಕೆಯಿಂದ ಮುಟ್ಟಬೇಕಾಗುತ್ತದೆ. ಜನ ಹಾಗೂ ಸಮಾಜ ನಮಗೆ ಗುರುತರವಾದ ಜವಾಬ್ದಾರಿಯನ್ನು ಕೊಟ್ಟಿದೆ. ಪ್ರತಿಯೊಬ್ಬ ವ್ಯಕ್ತಿಗೂ ಆಯಾ ಧರ್ಮ, ಜಾತಿಯ ಬಗ್ಗೆ ಅಭಿಮಾನ, ಗೌರವ ಇದ್ದೇ ಇರುತ್ತದೆ. ಅದು ತಪ್ಪಲ್ಲ. ಸ್ವಧರ್ಮ ನಿಷ್ಠೆಯಿಂದ ನಾವು ರಾಜಕಾರಣ ಮಾಡಬೇಕು" ಎಂದರು.
ಇನ್ನು ಪಂಚಮಸಾಲಿ ಸಮುದಾಯದಿಂದ ಮೀಸಲಾತಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಸಮಾಜದ ವ್ಯಕ್ತಿ ಹಾಗೂ ಸರ್ಕಾರದ ಭಾಗವಾಗಿ ಎರಡನ್ನು ಸರಿದೂಗಿಸಿ ಕೆಲಸ ಮಾಡುತ್ತಿದ್ದೇನೆ. ಹೋರಾಟದ ನೇತೃತ್ವ ವಹಿಸಿರುವ ಜಯಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿ ಭೇಟಿ ಮಾಡಿದ್ದಾರೆ" ಎಂದು ಹೇ