ಚಿಕ್ಕಮಗಳೂರು, ಸೆ. 05 (DaijiworldNews/PY): "ನಾನು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವನಲ್ಲ" ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನಂತೂ ಕೋತ್ವಾಲ್ ರಾಮಚಂದ್ರನ ಶಿಷ್ಯನಲ್ಲ. ಏಕೆಂದರೆ ಕೋತ್ವಾಲ್ ತೀರಿಕೊಂಡಾಗ ನಾನು ಪ್ರೈಮರಿ ಓದುತ್ತಿದ್ದೆ. ಕೋತ್ವಾಲ್ ರಾಮಚಂದ್ರರ ಶಿಷ್ಯಂದಿರು ಬೇರೆ" ಎಂದಿದ್ದಾರೆ.
"ನಾನು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವನಲ್ಲ. ಬದಲಾಗಿ ಹೋರಾಟ ಮಾಡಿ ಜೈಲಿಗೆ ಹೋದವನು" ಎನ್ನುವ ಮೂಲಕ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
"ಸಿ.ಟಿ ರವಿ ಅವರೇ ಕೋತ್ವಾಲ್ ರಾಮಚಂದ್ರ ಅವರ ಶಿಷ್ಯ ಇರಬಹುದು. ಪಾಪ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಾಗೂ ಉಮಾಭಾರತಿ ಅವರಿಗೂ ಒಂದು ಸರ್ಟಿಫಿಕೇಟ್ ಇತ್ತು" ಎಂದು ಡಿಕೆಶಿ ಹೇಳಿದ್ದರು.