ಪಣಜಿ, ಸ.05 (DaijiworldNews/HR): ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರನ್ನು ಅಳಿಸಿಹಾಕುವುದು ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಫುಟ್ಬಾಲ್ ಇತಿಹಾಸದಿಂದ ಅಥವಾ ರೈಟ್ ಸಹೋದರರನ್ನು ವಾಯುಯಾನ ಇತಿಹಾಸದಿಂದ ಕೈಬಿಟ್ಟಂತೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಏಕರೂಪಗೊಳಿಸುವ ಪ್ರಯತ್ನಗಳು ಭಾರತದ ಅತಿದೊಡ್ಡ ಶತ್ರು ಎಂದಿದ್ದಾರೆ.
ಇನ್ನು ಫುಟ್ಬಾಲ್ ಇತಿಹಾಸವನ್ನು ಬರೆದರೆ ಅದರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಇಲ್ಲದಿದ್ದರೆ? ಮೋಟಾರ್ ಕಾರಿನ ಇತಿಹಾಸ ಬರೆದರೆ, ಹೆನ್ರಿ ಫೋರ್ಡ್ ಇಲ್ಲದಿದ್ದರೆ? ವಿಮಾನದ ಇತಿಹಾಸ ಬರೆಯುವಾಗ ರೈಟ್ ಸಹೋದರರು ಅದರಲ್ಲಿ ಇಲ್ಲದಿದ್ದರೆ? ಏನಾಗುತ್ತದೆ ಎಂಬುದನ್ನು ಊಹಿಸಿ. ಇತಿಹಾಸವನ್ನು ಪುನಃ ಬರೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಾವು ಇದರ ವಿರುದ್ಧ ನಿಲ್ಲಬೇಕು" ಎಂದು ಹೇಳಿದ್ದಾರೆ.