ನವದೆಹಲಿ, ಸ.05 (DaijiworldNews/HR): ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 44 ಶಿಕ್ಷಕರಿಗೆ 2021ನೇ ಸಾಲಿನ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ಗುಜರಾತ್, ಆಂಧ್ರ ಪ್ರದೇಶ, ಸಿಕ್ಕಿಂ, ಮಹಾರಾಷ್ಟ್ರ, ಒಡಿಶಾ, ಬಿಹಾರ ಮತ್ತು ತಮಿಳುನಾಡು ಸೇರಿದಂತೆ 10 ವಿವಿಧ ರಾಜ್ಯಗಳ ತಲಾ ಇಬ್ಬರು ಶಿಕ್ಷಕರಿಗೆ ವರ್ಚ್ಯುವಲ್ ಸಮಾವೇಶದ ಮೂಲಕ ರಾಷ್ರಪತಿಗಳು ರಾಷ್ಟ್ರಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ರಾಮನಾಥ್ ಕೋವಿಂದ್, "ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತತ್ವಜ್ಞಾನಿ ಹಾಗೂ ವಿದ್ವಾಂಸರೆಂದೇ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದು, ಶಿಕ್ಷಕರಾಗಿಯೇ ಎಲ್ಲರ ನೆನಪಿನಲ್ಲಿ ಉಳಿಯಬೇಕೆಂದು ಬಯಸಿದ್ದು ಅದರಂತೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ" ಎಂದರು.