ಬೆಂಗಳೂರು, ಸ.05 (DaijiworldNews/HR): "ಇಂಟರ್ನೆಂಟ್ ಸಂಪರ್ಕವಿಲ್ಲದ ಹಾಗೂ ಸ್ಮಾರ್ಟ್ ಫೋನ್ ಇಲ್ಲದ ಮಕ್ಕಳ ಬಗ್ಗೆ ಹೆಚ್ಚಿನ ರೀತಿಯ ಕಾಳಜಿವಹಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರ ಸಲಹೆ ಮೇರೆಗೆ ಮಕ್ಕಳಿಗೆ ಹಂತ ಹಂತವಾಗಿ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ" ಎಂದು ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ ಸಚಿವ ಬಿಸಿ.ನಾಗೇಶ್ ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ರಾಜ್ಯದಾದ್ಯಂತ ಶೇ.75ರಷ್ಟು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಸಾಕಷ್ಟು ಪೋಷಕರು ತಮ್ಮ ವಾರ್ಡ್ಗಳ ಶಿಕ್ಷಣದ ಬಗ್ಗೆ ಚಿಂತಿತರಾಗಿದ್ದರಿಂದ ಭೌತಿಕ ತರಗತಿಗಳ ಪುನರಾರಂಭಿಸಲು ಉತ್ಸುಕರಾಗಿದ್ದರು" ಎಂದರು.
ಇನ್ನು "ಶೇ.100ರಷ್ಟು ಲಸಿಕೆ ಪಡೆದ ಬಳಿಕ ತರಗತಿಗಳ ಆರಂಭಿಸುವಂತೆ ಕೆಲ ಪೋಷಕರು ಮನವಿ ಮಾಡಿಕೊಂಡಿದ್ದು, ಬೆಳಗಾವಿ, ಧಾರವಾಡ ಹಾಗೂ ಯಾದಗಿರಿಯ ಕೆಲ ವಿದ್ಯಾರ್ಥಿಗಳು ತರಗತಿಗಳನ್ನು ಪೂರ್ಣ ದಿನದವರೆಗೂ ವಿಸ್ತರಣೆ ಮಾಡುವಂತೆ ತಿಳಿಸಿದ್ದರೆ. ದೂರದ ಸ್ಥಳಗಳಿಂದ ಪ್ರಯಾಣಿಸಬೇಕಾಗಿರುವುದರಿಂದ ಸೀಮಿತ ಗಂಟೆಗಳ ತರಗತಿಗಳಿಂದ ಪ್ರಯೋಜನವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ" ಎಂದಿದ್ದಾರೆ.
"ಇಲ್ಲಿಯವರೆಗೆ ಸುಮಾರು 2.6 ಲಕ್ಷ ಶಿಕ್ಷಕರು ಮತ್ತು ಸಿಬ್ಬಂದಿಗಳು ಸೇರಿ ಒಟ್ಟು ಶೇ.95 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಶೀಘ್ರದಲ್ಲೇ ಶೇ.100ರಷ್ಟು ಸಾಧಿಸಲಾಗುತ್ತದೆ" ಎಂದು ಹೇಳಿದ್ದಾರೆ.