ಪಾಲ್ಘಾರ್, ಸ.05 (DaijiworldNews/HR): ಪೊಲೀಸರು ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ವಸಾಯ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಬಂಧಿತ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ವಸಾಯ್ ಠಾಣೆಯ ಮಂಗಳಾ ಗಾಯಕ್ವಾಡ್ ಎಂದು ಗುರುತಿಸಲಾಗಿದೆ.
ಮಂಗಳಾ ಗಾಯಕ್ವಾಡ್ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ನೋಡಿಕೊಳ್ಳುತ್ತಿದ್ದು, ಗುಜರಿ ವ್ಯಾಪಾರಿಗಳ ಜತೆ ಸೇರಿ ವಂಚನೆಯಿಂದ 26 ಲಕ್ಷ ರೂ. ಗಳಿಸಿಕೊಂಡಿದ್ದಾಗಿ ಹಿರಿಯ ಇನ್ಸ್ಪೆಕ್ಟರ್ ಕಲ್ಯಾಣ್ ಕಾರ್ಪೆ ಹೇಳಿದ್ದಾರೆ.
ಇನ್ನು ಮಹಿಳಾ ಪೊಲೀಸ್ ಸಿಬ್ಬಂದಿಯಾದ ಮಂಗಳಾ ಗಾಯಕ್ವಾಡ್ಳನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಬಂಧಿಸಲಾಗಿದೆ ಎಂಧು ಅಧಿಕಾರಿಗಳು ತಿಳಿಸಿದ್ದಾರೆ.