ನವದೆಹಲಿ, ಸೆ. 05 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ನಲ್ಲಿ ಶೇ.70ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ 23ರಂದು ಈ ಪ್ರಮಾಣ ಶೇ.72ರಷ್ಟಿತ್ತು.
"ಈ ರ್ಯಾಂಕಿಂಗ್ ಅನ್ನು ಚುನಾವಣೆಯಲ್ಲಿ ಆಯ್ಕೆಯಾದ 13 ರಾಷ್ಟ್ರಗಳ ನಾಯಕರ ರಾಷ್ಟ್ರೀಯ ರೇಟಿಂಗ್ಸ್ ಆಧಾರದ ಮೇಲೆ ನೀಡಿದೆ. ಬೇರೆ ಬೇರೆ ದೇಶಗಳಲ್ಲಿ ಈ ರೇಟಿಂಗ್ ವಿಭಿನ್ನವಾಗಿವೆ" ಎಂದು ಅಮೇರಿಕಾದ ಮಾಹಿತಿ ಗುಪ್ತಚರ ಕಂಪನಿಯೊಂದು ಹೇಳಿದೆ.
ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಲ್ ಲೋಪೆಜ್ ಒಬ್ರಡಾರ್ ಅವರು ಎರಡನೇ ಸ್ಥಾನದಲ್ಲಿದ್ದು, ಅವರಿಗೆ ಶೇ.64ರಷ್ಟು ಅನುಮೋದನೆಯ ರೇಟಿಂಗ್ ದೊರೆತಿದೆ.
ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರ್ರಿಸನ್ ಶೇ.48 ಅನುಮೋದನೆಯ ರೇಟಿಂಗ್ ಪಡೆದುಕೊಂಡಿದ್ದು, ಇಬ್ಬರೂ ಕೂಡಾ ಐದನೇ ಸ್ಥಾನದಲ್ಲಿದ್ದಾರೆ.
ಇಟಲಿ ಪ್ರಧಾನಿ ಮ್ಯಾರಿಯೊ ದ್ರಾಘಿ ಶೇ.63 ಅನುಮೋದನೆ ರೇಟಿಂಗ್ ಪಡೆದುಕೊಂಡಿದ್ದು, ಜರ್ಮನ್ ಚಾನ್ಸಲರ್ ಏಂಜಲಾ ಮರ್ಕೆಲ್ ಅವರಿಗೆ ಶೇ. 52ರಷ್ಟು ಅನುಮೋದನೆಯ ರೇಟಿಂಗ್ ದೊರೆತಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರಿಗೆ ಶೇ45 ಅನುಮೋದನೆಯ ರೇಟಿಂಗ್ ಪಡೆದುಕೊಂಡಿದ್ದರೆ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶೇ.41ರಷ್ಟು ಅನುಮೋದನೆಯ ರೇಟಿಂಗ್ ಪಡೆದಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಶೇ,39, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಾ-ಇನ್ ಶೇ.38, ಸ್ಪೇನ್ ಪ್ರಧಾನಿ ಪೆಡ್ರೊ ಸಾಂಛೇಜ್ ಶೇ.35, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶೇ.34 ಹಾಗೂ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಅವರು ಶೇ. 25 ಅನುಮೋದನೆಯ ರೇಟಿಂಗ್ ಪಡೆದಿದ್ದಾರೆ.