ಭೋಪಾಲ್, ಸ.04 (DaijiworldNews/HR): ಮಧ್ಯ ಪ್ರದೇಶದ ಉಜೈನ್ನಲ್ಲಿ ಬೀದಿ ನಾಯಿಗಳ ಬಾಯಿಗೆ ಆಸಿಡ್ ಸುರಿಯುವ ಮೂಲಕ ಐದು ನಾಯಿಗಳನ್ನು ಹತ್ಯೆಗೈದಿರುವ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ನಾಯಿಗಳ ನರನಾಟ ನೋಡಿದ ಜನರು ಅವುಗಳನ್ನು ಪಶು ಆಸ್ಪತ್ರೆಗೆ ದಾಖಲಿಸಿದಾರೂ ಚಿಕಿತ್ಸೆ ಫಲಕಾರಿಯಾಗದೇ ಅವು ಸಾವನ್ನಪ್ಪಿವೆ.
ಇನ್ನು ಈ ವಿಚಾರವಾಗಿ ಪೀಪಲ್ ಆರ್ ಅನಿಮಲ್ಸ್ ಎಂಬ ಸಂಘಟನೆಯ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ ಸೆಕ್ಷನ್ 428 (ಪ್ರಾಣಿಗಳ ಜತೆ ಅಸಭ್ಯ ವರ್ತನೆ) ಮತ್ತು ಕೆಲವು ಐಪಿಎಸ್ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.