ಕೊಲಂಬೊ,ಸ.04 (DaijiworldNews/HR): ಕೊರೊನಾದ ಮೂರನೇ ಅಲೆ ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತ 150 ಟನ್ಗೂ ಅಧಿಕ ಆಮ್ಲಜನಕ ಕಳುಹಿಸಿದೆ ಎಂದು ವರದಿಯಾಗಿದೆ.
ಸಾಂಧರ್ಭಿಕ ಚಿತ್ರ
ಕೊರೊನಾದಿಂದ ಶ್ರೀಲಂಕಾದಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಸೆ. 13ರ ವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ.
ಇನ್ನು ವಿಶಾಖಪಟ್ಟಣ ಮತ್ತು ಚೆನ್ನೈನಿಂದ ಕಳುಹಿಸಲಾಗಿರುವ 150 ಟನ್ಗಳಷ್ಟು ಆಮ್ಲಜನಕ ಕೊಲಂಬೊ ತಲುಪಿದೆ ಎಂದು ಇಲ್ಲಿನ ಭಾರತೀಯ ಹೈಕಮಿಷನ್ ಶನಿವಾರ ಟ್ವೀಟ್ ಮಾಡಿದೆ.
ಭಾರತದ ನೌಕಾಪಡೆಯ ಹಡಗು ಆಗಸ್ಟ್ನಲ್ಲಿ 100 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಶ್ರೀಲಂಕಾಕ್ಕೆ ತಲುಪಿಸಿದೆ ಎಂದೂ ಹೈಕಮಿಷನ್ ತಿಳಿಸಿದೆ.