ಕೋಲ್ಕತ್ತಾ, ಸ.04 (DaijiworldNews/HR): ಸೆಪ್ಟೆಂಬರ್ 30ರಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಖಾಲಿ ಇರುವ ಮೂರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಎಣಿಕೆಯನ್ನು ಅಕ್ಟೋಬರ್ 3 ರಂದು ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಸಾಂಧರ್ಭಿಕ ಚಿತ್ರ
ಪಶ್ಚಿಮ ಬಂಗಾಳದ ಸಂಸೆರ್ ಗಂಜ್, ಜಂಗೀಪುರ್ ಮತ್ತು ಭಾಬನಿಪುರ ಮತ್ತು ಒಡಿಶಾದ ಪಿಪ್ಲಿ ಉಪಚುನಾವಣೆ ಸೆಪ್ಟೆಂಬರ್ 30 ರಂದು ಕೊರೊನಾ ನಿಯಮಗಳನ್ನು ಅನುಸರಿಸಿ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಇನ್ನು ಹೊಸ ನಿಯಮವನ್ನು ಪರಿಚಯಿಸಲಾಗಿದ್ದು, ಅದರ ಪ್ರಕಾರ ಯಾವುದೇ ಅಭ್ಯರ್ಥಿ, ಮತದಾನ ಏಜೆಂಟ್ ಅಥವಾ ಚಾಲಕ ಚುನಾವಣೆ ಅಥವಾ ಸಾರ್ವಜನಿಕ ಅಧಿಕಾರಿಗಳೊಂದಿಗೆ ಸಂಪರ್ಕಕ್ಕೆ ಬರುವ ಮುನ್ನ ಕೋವಿಡ್-19 ವಿರುದ್ಧ ಎರಡು ಲಸಿಕೆ ಹಾಕಬೇಕು.
ಪ್ರಸ್ತುತ ವಿವಿಧ ರಾಜ್ಯಗಳ ಶಾಸಕಾಂಗ ಸಭೆಗಳಲ್ಲಿ 31 ಸ್ಥಾನಗಳು ಮತ್ತು ಲೋಕಸಭೆಯಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಕೊರೊನಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ವಿಶೇಷ ವಿನಂತಿಯ ಮೇರೆಗೆ ಸೆಪ್ಟೆಂಬರ್ ನಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ದಲ್ಲಿ ಮಾತ್ರ ಉಪಚುನಾವಣೆಗಳು ನಡೆಯುತ್ತಿವೆ.