ನವದೆಹಲಿ, ಸೆ. 04 (DaijiworldNews/PY): ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮನೀಶ್ ನರ್ವಾಲ್ ಹಾಗೂ ಸಿಂಗರಾಜ್ ಅಧಾನ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಭಿನಂದಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ವೈಭವ ಮುಂದುವರಿದಿದ್ದು, ಯುವ ಹಾಗೂ ಅದ್ಭುತ ಪ್ರತಿಭೆ ಮನೀಶ್ ನರ್ವಾಲ್ ಚಿನ್ನ ಗೆಲ್ಲುವ ಮೂಲಕ ಉತ್ತಮ ಸಾಧನೆ ಗೈದಿದ್ದಾರೆ. ಭಾರತೀಯ ಕ್ರೀಡೆಗೆ ಇದೊಂದು ವಿಶೇಷವಾದ ಕ್ಷಣ. ನಿಮಗೆ ಅಭಿನಂದನೆಗಳು" ಎಂದು ತಿಳಿಸಿದ್ದಾರೆ.
ಸಿಂಗರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, "ಸಿಂಗರಾಜ್ ಅಧಾನ ಅವರು ಮತ್ತೊಮ್ಮೆ ಸಾಧನೆ ಮಾಡಿದ್ದಾರೆ. ಈ ಬಾರಿ ಮಿಶ್ರ 50 ಮೀಟರ್ ಎಸ್ಎಚ್1ನಲ್ಲಿ ಪದಕ ಗೆದ್ದಿದ್ದಾರೆ. ಅವರ ಈ ಸಾಧನೆಯನ್ನು ಭಾರತ ಸಂಭ್ರಮಿಸುತ್ತಿದೆ. ನಿಮಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ.
ಜಪಾನ್ನಲ್ಲಿ ನಡೆಯುತ್ತಿರು ಪ್ಯಾರಾಲಿಂಪಿಕ್ಸ್ ಕ್ರೀಡೆಯಲ್ಲಿ ಶೂಟಿಂಗ್ನಲ್ಲಿ ಮನೀಶ್ ನರ್ವಾಲ್ ಚಿನ್ನ ಹಾಗೂ ಸಿಂಗರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ.