ಕಲಬುರ್ಗಿ, ಸೆ 04 (DaijiworldNews/MS): ರೈತರಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿತ್ತು, ಇವುಗಳ ಸದುಪಯೋಗ ಪಡೆದು ಕೃಷಿಯಲ್ಲಿ ಲಾಭ ಪಡೆಯಬೇಕು. ಆತ್ಮಹತ್ಯೆಯಂತ ಆಲೋಚನೆಗಳನ್ನು ಮಾಡಬಾರದು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯುವ ವಿಚಾರದ ಕುರಿತು ಚಿಂತಿಸಬೇಕಾಗಿದೆ. ರೈತರಿಗೆ ಉತ್ತಮ ಆದಾಯ ಬರಬೇಕೆಂದರೆ ಅದಕ್ಕೆ ತಕ್ಕಂತೆ ಮಾರುಕಟ್ಟೆ ದೊರೆಯಬೇಕು ಹಾಗೂ ರೈತರೂ ಕೂಡಾ ಪ್ರಮುಖ ಬೆಳೆ ಜೊತೆಗೆ ಪರ್ಯಾಯ ಕೃಷಿ ಇಮಾಡಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಇನ್ನು ದೆಹಲಿಯಲ್ಲಿ ರೈತರ ಹೋರಾಟದ ಪ್ರತಿಕ್ರಿಯಿಸಿದ ಅವರು, ಹೋರಾಟದಲ್ಲಿ ನಿರತರಾದ ರೈತರ ಜೊತೆ 11 ಸುತ್ತು ಮಾತುಕತೆ ಆಗಿದೆ. ರೈತರ ಜೊತೆ ಮಾತನಾಡಲು ನಾವು ಸಿದ್ಧರಿದ್ದೇವೆ. ಆದರೆ ಕೃಷಿ ಕಾಯ್ದೆ ಮಸೂದೆ ಯಾಕೆ ಮಾಡಿದ್ದೇವೆ ಎನ್ನುವುದನ್ನು ಹೋರಾಟನಿರತ ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.