ನವದೆಹಲಿ, ಸ.03 (DaijiworldNews/HR): "ಭಾರತ ಮತ್ತು ರಷ್ಯಾ ಸ್ನೇಹವನ್ನು ಪರೀಕ್ಷೆಗೊಡ್ಡುವ ಸಮಯವನ್ನು ಮೀರಿ ಬಲಿಷ್ಠವಾಗಿದ್ದು, ಕೊರೊನಾ ಲಸಿಕೆ ಕಾರ್ಯಕ್ರಮ ಸೇರಿದಂತೆ ಕೊರೊನಾದ ಸಮಯದಲ್ಲಿ ಉಭಯ ದೇಶಗಳ ನಡುವಿನ ದೃಢವಾದ ಸಹಕಾರ ಉತ್ತಮವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶ್ಲಾಘಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಭಾರತ ಮತ್ತು ರಷ್ಯಾ ಒಟ್ಟಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರಲು ಸಹಾಯ ಮಾಡುತ್ತಿದ್ದು, ಭಾರತವು ಪ್ರತಿಭಾವಂತ ಮತ್ತು ಸಮರ್ಪಿತ ಕಾರ್ಯಪಡೆಗಳನ್ನು ಹೊಂದಿದ್ದು, ದೂರಪ್ರಾಚ್ಯವು ಸಂಪನ್ಮೂಲಗಳಿಂದ ಸಮೃದ್ಧವಾಗಿದೆ" ಎಮ್ದರು.
ಇನ್ನು "ಪೂರ್ವ ರಷ್ಯಾದ ಅಭಿವೃದ್ಧಿಗೆ ಕೊಡುಗೆ ನೀಡಲು ಭಾರತೀಯ ಪ್ರತಿಭೆಗಳಿಗೆ ಅಪಾರವಾದ ಅವಕಾಶವಿದೆ" ಎಂದಿದ್ದಾರೆ.
ಫೋರಂನಲ್ಲಿ ಪಾಲ್ಗೊಳ್ಳಲು ಅವರು 2019 ರಲ್ಲಿ ರಷ್ಯಾದ ವ್ಲಾಡಿವೋಸ್ಟಾಕ್ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು ಮತ್ತು 'ಆಕ್ಟ್ ಫಾರ್ ಈಸ್ಟ್ ಪಾಲಿಸಿ' ಗೆ ಭಾರತದ ಬದ್ಧತೆಯನ್ನು ಘೋಷಿಸಿದರು.