ಬೆಂಗಳೂರು, ಸ.03 (DaijiworldNews/HR): "ಕೊರೊನಾದ ಎರಡನೇ ಅಲೆಯಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದು ಬಿಜೆಪಿಯು ಜನರ ಜೀವ, ಜೀವನದೊಂದಿಗೆ ಚೆಲ್ಲಾಟವಾಡಿದ್ದು, ಮೂರನೆ ಅಲೆಯಲ್ಲಿಯೂ ಹೆಣದ ಮೇಲೆ ಹಣ ಮಾಡಿದಿರಿ" ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಕೊರೊನಾದ ಮೊದಲನೆಯ ಮತ್ತು ಎರಡನೆಯ ಅಲೆಯ ಸಂಧರ್ಭದಲ್ಲಿ ಮೈಮರೆತಿದ್ದ ಹಾಗೆ ಈಗ ಮೂರನೇ ಅಲೆಗೂ ಮೈಮರೆತಿದ್ದೀರ? ಎಂದು ಪ್ರಶ್ನಿಸಿದೆ.
ಇನ್ನು ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂಬ ಮಾಹಿತಿಯಿದ್ದರೂ ಆಸ್ಪತ್ರೆಗಳಲ್ಲಿ ಬೆಡ್ಗಳಿಗೆ ಹಾಹಾಕಾರವಿದ್ದು, 3ನೇ ಅಲೆ ಎದುರಿಸಲು ಸಿದ್ಧವಿದ್ದೇವೆ ಎಂದು ಇನ್ನೆಷ್ಟು ದಿನ ಸುಳ್ಳು ಹೇಳುತ್ತೀರಿ" ಎಂದು ವಾಗ್ದಾಳಿ ನಡೆಸಿದೆ.