ಅಗ್ರಾ, ಸೆ 3 (DaijiworldNews/MS): ಆಗ್ರಾದ ಮಹಿಳಾ ಕಾನ್ಸ್ಟೇಬಲ್ ಒಬ್ಬರು , ಸಮವಸ್ತ್ರದಲ್ಲಿ ಡ್ಯೂಟಿ ರಿವಾಲ್ವರ್ ತೋರಿಸಿ ವಿಡಿಯೋ ಮಾಡಿರುವುದು ಅಂತರ್ಜಾಲದಲ್ಲಿ ವೈರಲ್ ಆಗಿ ಟ್ರೋಲ್ ಆದ ಬಳಿಕ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಹಿಳಾ ಕಾನ್ಸ್ಟೇಬಲ್ ಪ್ರಿಯಾಂಕ ಮಿಶ್ರಾ ಅವರು , ಆಡಿಯೋ ತುಣುಕು ನ್ನು ಲಿಪ್ ಸಿಂಕ್ ಮಾಡಿ , ರಿವಾಲ್ವರ್ ಬಳಸಿ " ರಾಜ್ಯದಲ್ಲಿ ಅಪರಾಧವನ್ನು ವೈಭವೀಕರಿಸುತ್ತಾ, ಅವರು ಜನಪ್ರಿಯ ಹಿಂದಿ ಸಂಭಾಷಣೆಗೆ ಲಿಪ್ ಸಿಂಕ್ ಮಾಡುವುದನ್ನು ಕಾಣಬಹುದಾಗಿದೆ, "ಹರಿಯಾಣ ಮತ್ತು ಪಂಜಾಬ್ ಯಾವುದೇ ಕಾರಣವಿಲ್ಲದೆ ಕೆಟ್ಟ ಖ್ಯಾತಿಯನ್ನು ಹೊಂದಿವೆ. ಉತ್ತರ ಪ್ರದೇಶಕ್ಕೆ ಬನ್ನಿ. ರಂಗಬಾಜಿ ಏನೆಂದು ನಾವು ನಿಮಗೆ ತೋರಿಸುತ್ತೇವೆ .. ಇಲ್ಲಿ 5 ವರ್ಷದೊಳಗಿನ ಮಕ್ಕಳು ಬಂದೂಕುಗಳನ್ನು ಬಳಸುತ್ತಾರೆ" ಎನ್ನುವ ಅರ್ಥದ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ ." ರಿವಾಲ್ವರ್ಗಳನ್ನು ಇರಿಸಲಾಗಿರುವ ಪೊಲೀಸ್ ಸ್ಟೋರ್ ರೂಂನಲ್ಲಿ ಪ್ರಿಯಾಂಕ ಮಿಶ್ರಾ ಹಾಜರಿದ್ದಾಗ ಅವರು ವೀಡಿಯೊವನ್ನು ಚಿತ್ರೀಕರಿಸಲು ಅವುಗಳಲ್ಲಿ ಒಂದನ್ನು ಬಳಸಿದರು. ಇಲಾಖೆಯಿಂದ ಆಕೆಗೆ ನಿಯೋಜಿಸಲಾದ ಸೇವಾ ರಿವಾಲ್ವರ್ ಅವರ ಬಳಿ ಇಲ್ಲ" ಘಟನೆಯ ವಿರುದ್ದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ತನ್ನ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ತನ್ನನ್ನು ಅತಿ ಹೆಚ್ಚು ಟ್ರೋಲ್ ಮಾಡಲಾಗುತ್ತಿತ್ತು. ಜನರು ನನ್ನ ಮೇಲೆ ಕೋಪಗೊಂಡಿದ್ದರೆ, ನಾನು ನನ್ನ ಹುದ್ದೆ ತೊರೆಯಲು ತಯಾರಿದ್ದೇನೆ " ಎಂದು ಹೇಳಿ ಪ್ರಿಯಾಂಕ ಹೇಳಿದ್ದಾರೆ.
ಪ್ರಿಯಾಂಕ ರಾಜೀನಾಮೆಯನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮುನಿರಾಜ್ ಜಿ. ಅವರಿಗೆ ಕಳುಹಿಸಲಾಗಿದೆ, ಆದರೆ ಇನ್ನೂ ಅಂಗೀಕರವಾಗಿಲ್ಲ ಎಂದು ತಿಳಿದುಬಂದಿದೆ.