ಬೆಂಗಳೂರು, ಸೆ. 03 (DaijiworldNews/PY): ಪ್ರತ್ಯೇಕ ಲಿಂಗಾಯುತ ಧರ್ಮ ಹೋರಾಟ ನಿಲ್ಲಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಇದೀಗ ಉಲ್ಟಾ ಹೊಡೆದಿದ್ದು, "ಈಗ ಪ್ರತ್ಯೇಕ ಧರ್ಮದ ಹೋರಾಟ ಇಲ್ಲ" ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಎಲ್ಲಾ ಉಪ ಪಂಗಡ ಸೇರಿ ಮಾನ್ಯತೆ ಕೇಳಿದ್ದೆವು. ಆದರೆ, ಸಿಗಲಿಲ್ಲ. ಈಗ ಪ್ರತ್ಯೇಕ ಧರ್ಮದ ಹೋರಾಟವಿಲ್ಲ. ಈ ಬಗ್ಗೆ ನಾನು ನಾಯಕತ್ವ ವಹಿಸಿಕೊಳ್ಳುವುದಿಲ್ಲ. ಎಲ್ಲರೂ ಜೊತೆಯಾಗಿ ಹೋಗಬೇಕು ಎನ್ನುವುದು ನನ್ನ ಅನಿಸಿಕೆಯಾಗಿದೆ" ಎಂದು ಹೇಳಿದ್ದಾರೆ.
"ಎಲ್ಲರೂ ಜೊತೆಯಾಗಿ ಸಮುದಾಯಕ್ಕೆ ಉದ್ಯೋಗ, ಶಿಕ್ಷಣಕ್ಕೆ ಒಳ್ಳೆಯದಾಗಬೇಕು ಎಂದು ತಿಳಿಸಿದ್ದೆ. ಎಲ್ಲರೂ ಜೊತೆಯಾಗಿ ಹೋರಾಟ ಮಾಡೋಣ ಎನ್ನುವುದು ನನ್ನ ಅಭಿಪ್ರಾಯ. ಈ ಬಗ್ಗೆ ಏಕೆ ತಪ್ಪು ತಿಳುವಳಿಕೆ ಬಂದಿದೆ ಎಂದು ನನಗೆ ತಿಳಿದಿಲ್ಲ. ಪ್ರತ್ಯೇಕ ಶರ್ಮದ ಹೋರಾಟ ಎಂದು ನಾನು ಹೇಳಿಲ್ಲ" ಎಂದು ತಿಳಿಸಿದ್ದಾರೆ.
"ಬಿ.ಎಸ್ ಯಡಿಯೂರಪ್ಪ ಅವರು ದೊಡ್ಡ ನಾಯಕರು. ಅವರ ಜೊತೆ ನನ್ನ ಹೋಲಿಕೆ ಮಾಡಬೇಡಿ. ಎರಡನೇ ಹಂತದ ನಾಯಕರು ನಾವು" ಎಂದಿದ್ದಾರೆ.