ನವದೆಹಲಿ, ಸ.03 (DaijiworldNews/HR): ಅಖಂಡ ಭಾರತದಲ್ಲಿ ಲಾಹೋರ್ ಮತ್ತು ಕರಾಚಿ ಎರಡೂ ಇತ್ತು ಎಂಬುದನ್ನು ಪಾಕಿಸ್ತಾನ ನೆನಪಿಟ್ಟುಕೊಳ್ಳಬೇಕು ಎಂದು ಆರ್ಎಸ್ಎಸ್ ಪ್ರಚಾರಕ್ ಇಂದ್ರೇಶ್ ಕುಮಾರ್ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ತಿರುಗೇಟು ನೀಡಿದ್ದಾರೆ.
ಕಾಶ್ಮೀರ ನಮ್ಮದು ಎಂದು ಹೇಳಿರುವ ಪಾಕಿಸ್ತಾನಕ್ಕೆ ಪ್ರತಿಕ್ರಿಯಿಸಿದ ಅವರು, "ಪಾಕಿಸ್ತಾನ ಹೀಗೆ ಹೇಳುವ ಮುನ್ನಾ ತಮ್ಮ ಮೂಲವನ್ನು ನೆನಪು ಮಾಡಿಕೊಳ್ಳಬೇಕು. ಲಾಹೋರ್ ಮತ್ತು ಕರಾಚಿ ಅಖಂಡ ಭಾರತದಲ್ಲಿ ಇದ್ದಿದ್ದವು ಎನ್ನುವುದನ್ನು ಪಾಕಿಸ್ತಾನ ಮರೆಯಬಾರದು" ಎಂದಿದ್ದಾರೆ.
"ಪಾಕ್ ಕಾಶ್ಮೀರವನ್ನು ತನ್ನದು ಎಂದುಕೊಂಡರೇ, ಲಾಹೋರ್ ಹಾಗೂ ಕರಾಚಿ ನಮ್ಮದು. ಪಾಕಿಸ್ತಾನ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಯನ್ನು ಖಾಲಿ ಮಾಡಬೇಕು. ಇಲ್ಲವಾದಲ್ಲಿ ಪರಿಣಾಮವನ್ನು ಪಾಕಿಸ್ತಾನ ಎದುರಿಸಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನವನ್ನು ತಾಲಿಬಾನಿ ಮನಸ್ಥಿತಿಯ ದೇಶ ಎಂದು ಅವರು ಕರೆದಿದ್ದಾರೆ.