ಮುಂಬೈ, ಸೆ 3 (DaijiworldNews/MS): ಮಹಾರಾಷ್ಟ್ರದ ನವಿ ಮುಂಬೈನ ಹೋಟೆಲ್ ಒಂದರಲ್ಲಿ ವ್ಯಕ್ತಿಯೋರ್ವ ತನ್ನ12 ವರ್ಷ ವಯಸ್ಸಿನ ಪುತ್ರನೊಂದಿಗೆ ಸುಮಾರು ಎಂಟು ತಿಂಗಳುಗಳ ಕಾಲ ತಂಗಿ ಕೊನೆಗೆ 25 ಲಕ್ಷ ರೂ.ಗಳಷ್ಟು ಬಿಲ್ ಪಾವತಿಸದೆ ಪರಾರಿಯಾದ ಘಟನೆ ನಡೆದಿದೆ.
ಅಂಧೇರಿ ನಿವಾಸಿ ಮುರಳಿ ಕಾಮತ್ ಎಂದು ಗುರುತಿಸಿಕೊಂಡಿರುವ 43 ವರ್ಷದ ವ್ಯಕ್ತಿ 12 ವರ್ಷ ವಯಸ್ಸಿನ ತಮ್ಮ ಮಗನೊಂದಿಗೆ ಬಂದು ಕಳೆದ ವರ್ಷ ನವೆಂಬರ್ 23 ರಂದು ಖಾರ್ಘರ್ ಪ್ರದೇಶದ 'ಹೋಟೆಲ್ ತ್ರೀ-ಸ್ಟಾರ್' ಗೆ ಬಂದು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಎರಡು ಕೊಠಡಿಗಳನ್ನು ಬಾಡಿಗೆ ಪಡೆದು ತಂಗಿದ್ದರು. ಅವರು ಈ ವರ್ಷದ ಮೇ ವರೆಗೆ ಕಾಮತ್ ಹಣವನ್ನು ಪಾವತಿಸಲಿಲ್ಲ
ಆದರೆ ಜುಲೈ 17 ರಂದು, ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಅನ್ನು ಕೊಠಡಿಯಲ್ಲಿಯೇ ಬಿಟ್ಟು ಕಾಮತ್ ತನ್ನ ಮಗನೊಂದಿಗೆ ಬಾತ್ ರೂಂ ನ ಕಿಟಕಿಯಿಂದ ಪರಾರಿಯಾಗಿರುವು ಸಿಬ್ಬಂದಿಯ ಅರಿವಿಗೆ ಬಂದಿದೆ . ಇದೀಗ ಬೇರೆ ದಾರಿ ಕಾಣದೆ ಹೊಟೇಲ್ ಸಿಬ್ಬಂದಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ.