ಮೈಸೂರು, ಸ.03 (DaijiworldNews/HR): ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾದ ನಮ್ಮ ಮಕ್ಕಳನ್ನು ಎನ್ಕೌಂಟರ್ ಮಾಡಬೇಡಿ ಎಂದು ಆರೋಪಿಗಳ ಪೋಷಕರು ಪೊಲೀಸರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಸಾಂಧರ್ಭಿಕ ಚಿತ್ರ
ಆರೋಪಿಗಳು ಅತ್ಯಚಾರ ನಡೆಸಿದ ದಿನ ತೊಟ್ಟಿದ್ದ ಬಟ್ಟೆ ಹಾಗೂ ಹಲ್ಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಪೊಲೀಸರು ತಮಿಳುನಾಡಿನಲ್ಲಿರುವ ಆರೋಪಿಗಳ ಮನೆಗಳಿಗೆ ತೆರಳಿದಾಗ ಪೋಷಕರು ಕಣ್ಣೀರಿಡುತ್ತಾ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಕರ್ನಾಟಕ ಪೊಲೀಸರು ಆರೋಪಿಗಳನ್ನು ಎನ್ಕೌಂಟರ್ ಮಾಡುತ್ತಾರೆ ಎಂಬ ಸುದ್ದಿ ಸತ್ಯಮಂಗಲ, ಈರೋಡ್, ತಾಳವಾಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಹಬ್ಬಿದೆ.
ಆರೋಪಿಗಳನ್ನು ಎನ್ಕೌಂಟರ್ ಮಾಡುವಂತೆ ಸ್ಥಳೀಯ ಮಾಧ್ಯಮಗಳೂ ಕರ್ನಾಟಕದ ರಾಜಕಾರಣಿಗಳು ನೀಡಿದ ಹೇಳಿಕೆಯನ್ನು ತೋರಿಸಿದ್ದು, ಪೊಲೀಸರು ಎನ್ಕೌಂಟರ್ ಮಾಡಬಹುದು ಎಂಬ ಭೀತಿ ಪೋಷಕರಲ್ಲಿದೆ ಎನ್ನಲಾಗಿದೆ.