ಬೆಂಗಳೂರು, ಸೆ. 02 (DaijiworldNews/SM): ಪಕ್ಷ ನಿಷ್ಠೆಯ ಕಾರ್ಯಕರ್ತರು ಇರುವ ಕಾರಣದಿಂದಾಗಿ ಜೆಡಿಎಸ್ ಪಕ್ಷ ಉಳಿದು, ಬೆಳೆದುಬಂದಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಮುಖಂಡರು ದೇವೇ ಗೌಡ ಅವರ ಮುಖ ನೋಡಿ ಪಕ್ಷಕ್ಕೆ ಬಂದಿಲ್ಲ. ಬದಲಾಗಿ ಪಕ್ಷದ ತತ್ವ ಸಿದ್ಧಾಂತ ಹಾಗೂ ಜನಪರ ನಿರ್ಧಾರಗಳನ್ನು ಗಮನಿಸಿ ಬಂದಿದ್ದಾರೆ. ಕಾರ್ಯಕರ್ತರೇ ಪಕ್ಷದ ಜೀವಾಳ, ನಾಯಕರು ನೆಪಮಾತ್ರ ಎಂದು ಹೇಳಿದ್ದಾರೆ.
ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂದು ಎಲ್ಲರಿಗೂ ಸ್ಪಷ್ಟವಾಗಿ ಸೂಚನೆ ಕೊಡಲಾಗಿದೆ. ಮಹಿಳಾ ಮೀಸಲಾತಿಯ ಬಗ್ಗೆ ನಾನು ಸಿಎಂ ಆಗುವುದಕ್ಕೂ ಮೊದಲೇ ಹೋರಾಟ ಮಾಡಿದ್ದೇನೆ ಎಂದು ದೇವೇ ಗೌಡ ಅವರು ವಿವರಿಸಿದರು.