ಜಾರ್ಖಂಡ್, ಸೆ 2 (DaijiworldNews/MS): ಮಾಸ್ಕ್ ಧರಿಸದ ಕಾರಣಕ್ಕೆ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕನೊಬ್ಬನನ್ನು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಜಾರ್ಖಂಡ್ ನ ಛತ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವೀಡಿಯೋದಲ್ಲಿ ಪೊಲೀಸರು ಸೈನಿಕ ಪವನ್ ಕುಮಾರ್ ಯಾದವ್ ನನ್ನು ಬೂಟುಗಾಲಲ್ಲಿ ತುಳಿಯುವುದು, ಲಾಠಿಯಲ್ಲಿ ಬಡಿಯುವುದು, ಕಪಾಲಕ್ಕೆ ಹೊಡೆಯುವುದು ಕಂಡುಬಂದಿದೆ.
ಚತ್ರ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ (ಎಸ್ಪಿ) ಕಚೇರಿಯಲ್ಲಿ ಈ ಘಟನೆಯ ಕುರಿತು ವರದಿಯನ್ನು ಸಲ್ಲಿಸಿದ ನಂತರ ಇಬ್ಬರು ಪೊಲೀಸ್ ಅಧಿಕಾರಿಗಳೊಂದಿಗೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.