ರಾಜಸ್ಥಾನ, ಸ. 02 (DaijiworldNews/HR): ಮದುವೆ ಸಮಾರಂಭವೊಂದರಲ್ಲಿ ಆಹಾರ ಸೇವಿಸಿದ 45 ಮಕ್ಕಳು ಸೇರಿದಂತೆ 100 ಜನರು ಅಸ್ವಸ್ಥಗೊಂಡಿರುವ ಘಟನೆ ಚುರು ಪಟ್ಟಣದ ಸರ್ದಾರ್ ಶಹರ್ನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಮದುವೆ ಸಮಾರಂಭ ಮುಗಿದು ಸುಮಾರು 3-4 ಗಂಟೆಗಳ ಬಳಿಕ ಅನೇಕ ಜನರು ಕಿಬ್ಬೊಟ್ಟೆ ನೋವು, ವಾಂತಿ ಮತ್ತು ಅತಿಸಾರದ ಬಗ್ಗೆ ದೂರು ನೀಡಲು ಪ್ರಾರಂಭಿಸಿದ್ದು, ಆಹಾರ ವಿಷದಿಂದಾಗಿ ಜನರ ಸ್ಥಿತಿ ಹದಗೆಟ್ಟ ನಂತರ, ಅವರನ್ನು ಮಿನಿಬಸ್ ಮತ್ತು ಆಟೋ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇನ್ನು ಒಂದೇ ದಿನದಲ್ಲಿ 45 ಮಕ್ಕಳು ಸೇರಿದಂತೆ ಸುಮಾರು 100 ಮಂದಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆ ತಲುಪಿದ್ದು, ಈ ಎಲ್ಲರೂ ಮದುವೆಗೆ ಹಾಜರಾಗಿದ್ದರು. ಮದುವೆಯ ಆಹಾರವನ್ನು ಸೇವಿಸಿದ ನಂತರವೇ ಜನರು ಆಹಾರ ವಿಷದ ಬಗ್ಗೆ ದೂರಿದ್ದಾರೆ.
ಆಹಾರ ವಿಷದಿಂದಾಗಿ ಮಕ್ಕಳು, ವೃದ್ಧರು, ಮಹಿಳೆಯರು ಮತ್ತು ಪುರುಷರು ರಾತ್ರಿಯಿಡೀ ಆಸ್ಪತ್ರೆಗೆ ಭೇಟಿ ನೀಡುತ್ತಲೇ ಇದ್ದು, ವೈದ್ಯರಿಂದ ಹಿಡಿದು ಆರೋಗ್ಯ ಅಧಿಕಾರಿಗಳವರೆಗೆ, ರೋಗಿಗಳ ಸಂಖ್ಯೆಯನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.