ಮುಂಬೈ, ಸೆ 2 (DaijiworldNews/MS): ಬಿಗ್ ಬಾಸ್ 13 ವಿಜೇತ ಸಿದ್ಧಾರ್ಥ್ ಶುಕ್ಲಾ ಸೆಪ್ಟೆಂಬರ್ 2. ಗುರುವಾರ ತಮ್ಮ 40 ನೇ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಸಿದ್ಧಾರ್ಥ್ ಇತ್ತೀಚೆಗೆ ರಿಯಾಲಿಟಿ ಶೋಗಳಾದ ಬಿಗ್ ಬಾಸ್ ಒಟಿಟಿ ಮತ್ತು ಡ್ಯಾನ್ಸ್ ದೀವಾನೆ 3 ನಲ್ಲಿ ಕಾಣಿಸಿಕೊಂಡಿದ್ದರು.
‘ಬಾಲಿಕಾ ವಧು’ ಮತ್ತು ‘ದಿಲ್ ಸೆ ದಿಲ್ ತಕ್’ ಧಾರವಾಹಿಗಳಲ್ಲಿ ತನ್ನ ಪಾತ್ರದ ಮೂಲಕ ಪ್ರಸಿದ್ದಿಯನ್ನು ಪಡೆದಿದ್ದ ಸಿದ್ದಾರ್ಥ್ ಅವರ ಕೊನೆಯ ಪ್ರದರ್ಶನವೆಂದರೆ ಏಕ್ತಾ ಕಪೂರ್ ಅವರ ಜನಪ್ರಿಯ ಕಾರ್ಯಕ್ರಮ 'ಬ್ರೋಕನ್ ಬಟ್ ಬ್ಯೂಟಿಫುಲ್ 3' ಆಗಿತ್ತು. ಇದರಲ್ಲಿ ಅವರು ಅಗಸ್ತ್ಯನ ಪಾತ್ರವನ್ನು ನಿರ್ವಹಿಸಿದ್ದರು.
ಮಲಗುವ ಮುನ್ನ ಕೆಲವು ಔಷಧಿಗಳನ್ನು ತೆಗೆದುಕೊಂಡಿದ್ದ ಅವರು ಮತ್ತೆ ಎಚ್ಚರವಾಗಲೇ ಇಲ್ಲ. ಸಿದ್ಧಾರ್ಥ್ ಶುಕ್ಲಾ ಹೃದಯಘಾತದಿಂದ ಮೃತಪಟ್ಟಿರುವುದನ್ನು ಕೂಪರ್ ಆಸ್ಪತ್ರೆಯ ಮೂಲಗಳು ದೃಢಪಡಿಸಿದೆ.