ಬೆಂಗಳೂರು, ಸ. 02 (DaijiworldNews/HR): ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಭೂಗತ ಪಾತಕಿ ಬಾಂಬೆ ರವಿ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾಗೆ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಬಾಂಬೆ ರವಿ ಕಳೆದ ವರ್ಷ ರಾಬರ್ಟ್ ನಿರ್ಮಾಪಕ ಉಮಾಪತಿ ಮತ್ತು ದೀಪಕ್ ಗೆ ಧಮ್ಕಿ ಹಾಕಿದ್ದು, ಆತ ಹಣಕ್ಕೆ ಧಮ್ಕಿ ಹಾಕಿ ಕೊಲೆ ಸುಪಾರಿ ನೀಡಿದ್ದ ಎನ್ನಲಾಗಿದೆ.
ಇನ್ನು ಬಾಂಬೆ ರವಿಯು ಅನೇಕ ವರ್ಷಗಳಿಂದ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದು, ಆತನಿಗಾಗಿ ಪೊಲೀಸರು ವಿದೇಶಗಳಲ್ಲೂ ಹುಡುಕಾಟ ನಡೆಸಿದ್ದರು. ಅದರೆ ಕಳೆದ ವರ್ಷ ಬಾಂಬೆ ರವಿ ಸಿನಿಮಾ ನಿರ್ಮಾಪಕ ಉಮಾಪತಿ ಹಾಗೂ ದೀಪಕ್ ಗೆ ಧಮ್ಕಿ ಹಾಕಿ ಹಣಕ್ಕಾಗಿ ಕೊಲೆ ಮಾಡುವುದಾಗಿ ಸುಪಾರಿ ನೀಡಿದ್ದ.
ಇದೀಗ ಬಾಂಬೆ ರವಿ ಸೌತ್ ಆಫ್ರಿಕಾದಲ್ಲಿ ಕೊರೊನಾದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಸದ್ಯಕ್ಕೆ ಪೊಲೀಸರು ಬಾಂಬೆ ರವಿ ಸಾವಿನ ಕುರಿತಂತೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.