ದೆಹಲಿ, ಸ. 02 (DaijiworldNews/HR): ಹಿರಿಯ ಪತ್ರಕರ್ತರ ರಾಜ್ಯಸಭೆಯ ಮಾಜಿ ಸದಸ್ಯ ಚಂದನ್ ಮಿತ್ರಾ(65) ಅವರು ಬುಧವಾರ ತಡರಾತ್ರಿ ದೆಹಲಿಯಲ್ಲಿ ನಿಧನರಾಗಿದ್ದಾರೆ.
ಚಂದನ್ ಮಿತ್ರಾ 'ದಿ ಪಯೋನಿರ್' ಪತ್ರಿಕೆ ಸಂಪಾದಕರಾಗಿದ್ದು, ಜೂನ್ನಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದು, ಇವರು ಎರಡು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.
ಇನ್ನು ಚಂದನ್ ಮಿತ್ರಾ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು, "ಚಂದನ್ ಮಿತ್ರ ಅವರು ತಮ್ಮ ಬುದ್ಧಿಶಕ್ತಿ ಮತ್ತು ಒಳನೋಟಗಳಿಂದ ನೆನಪಿನಲ್ಲಿ ಉಳಿಯುತ್ತಾರೆ. ಅವರು ಮಾಧ್ಯಮ ಹಾಗೂ ರಾಜಕೀಯ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು. ಅವರ ನಿಧನ ಸುದ್ದಿ ನೋವುಂಟು ಮಾಡಿದೆ" ಎಂದು ಹೇಳಿದ್ದಾರೆ.