ಬೆಂಗಳೂರು, ಸೆ. 01 (DaijiworldNews/PY): "ಎನ್ಎಸ್ಯುಐ ಕಾರ್ಯಕರ್ತರ ಭಾವಚಿತ್ರ ಪತ್ರಿಕೆ ಹಾಗೂ ಟಿವಿಯಲ್ಲಿ ಬರಬೇಕು ಎಂದು ಕೆಪಿಸಿಸಿ ಭ್ರಷ್ಟಾಧ್ಯಕ್ಷ ಡಿಕೆಶಿ ಅವರು ಕರೆ ನೀಡಿದ್ದಾರೆ" ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಎನ್ಎಸ್ಯುಐ ಕಾರ್ಯಕರ್ತರ ಭಾವಚಿತ್ರ ಪತ್ರಿಕೆ ಹಾಗೂ ಟಿವಿಯಲ್ಲಿ ಬರಬೇಕು ಎಂದು ಕೆಪಿಸಿಸಿ ಭ್ರಷ್ಟಾಧ್ಯಕ್ಷ ಡಿಕೆಶಿ ಅವರು ಕರೆ ನೀಡಿದ್ದಾರೆ. ಹಾಗೆಂದರೆ ಅರ್ಥವೇನು ಡಿ ಕೆ ಶಿವಕುಮಾರ್ ಅವರೇ? ಈ ಹಿಂದೆ ಬೆಂಗಳೂರಿನ ಗ್ಯಾಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಘಟನೆಗಳು ಮತ್ತೆ ಮರುಕಳಿಸಬೇಕೆಂದು ಅರ್ಥವೇ?" ಎಂದು ಪ್ರಶ್ನಿಸಿದೆ.
"ಜೀವನದ ಬಹುತೇಕ ಸಮಯವನ್ನು ಎಐಸಿಸಿ ಕಚೇರಿ ಸೇವೆಯಲ್ಲಿ ಕಳೆದ ಗಾಂಧಿ ಕುಟುಂಬದ ಗುಲಾಮರೊಬ್ಬರ ಮುಖದ ಮೇಲೆ ಗಾಯದ ಕಲೆ ಇದೆ. ಅದು ಎನ್ಎಸ್ಯುಐ ಹೋರಾಟದ ಕುರುಹಂತೆ !!! ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕರೆಕೊಟ್ಟ ಹೋರಾಟ ಇದೆ ಮಾದರಿಯದೇ?" ಎಂದು ಕೇಳಿದೆ.
"ಡಿ ಕೆ ಶಿವಕುಮಾರ್ ಅವರೇ, ನಿಮ್ಮ ಕಾಲದಲ್ಲಿ ಎನ್ಎಸ್ಯುಐ ಹೋರಾಟ ಎಂದರೆ ಹೊಡಿಬಡಿ ಎಂದಾಗಿತ್ತೇ? ವಿದ್ಯಾರ್ಥಿ ನಾಯಕರಿಗೆ ಆಗಿನ ಕಾಲದ ರೌಡಿಗಳ ಒಡನಾಟವೂ ಇತ್ತೇ? ನಿಮ್ಮ ಹಿಂದಿನ ಸಂಗಾತಿಗಳು, ಗುರುಗಳ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವಿರಾ ಡಿ ಕೆ ಶಿವಕುಮಾರ್?" ಎಂದು ಪ್ರಶ್ನಿಸಿದೆ.