ಕಣ್ಣೂರು, ಸೆ 01(DaijiworldNews/MS): ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾದ 26 ವರ್ಷದ ಕೇರಳ ಕಣ್ಣೂರು ಜಿಲ್ಲೆಯ ಮಹಿಳೆ ಸುನೀಷಾ ಅವರ ಕೆಲ ದಿನಗಳ ಹಿಂದೆ ಮಾತನಾಡಿದ್ದ ಆಡಿಯೋ ವೈರಲ್ ಆಗಿದೆ.
"ನಿಮಗೆ ಸಾಧ್ಯವಾದರೆ, ದಯವಿಟ್ಟು ಈಗಲೇ ಬನ್ನಿ. ರಸ್ತೆಯ ಕಡೆಗೆ ಬನ್ನಿ. ನಾನು ಬರಲು ಸಿದ್ಧಳಾಗಿದ್ದೇನೆ, ಪತಿ ಹಾಗೂ ಅವನ ತಾಯಿ ನನಗೆ ಹಲ್ಲೆ ಮಾಡಿದ್ದಾರೆ ಈ ರಾತ್ರಿ ನಾನು ಜೀವಂತವಾಗಿರುತ್ತೇನೋ ಇಲ್ಲವೋ ನನಗೆ ಖಚಿತವಿಲ್ಲ ಎಂದು ತನ್ನ ಸಹೋದರನೊಂದಿಗೆ ಮಾತನಾಡುತ್ತಾ ಕಣ್ಣೀರಿಟ್ಟಿದ್ದಳು.
ಸುನೀಷಾ ಸಾವು ಆರಂಭದಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಪ್ರಕರಣ ಎಂದು ಭಾವಿಸಲಾಗಿತ್ತಾದರೂ, ಆಕೆಯ ಅತ್ತೆ-ಮಾವಂದಿರ ಹಿಂಸಾಚಾರದಿಂದಾಗಿ ತೀವ್ರ ಆಘಾತಕ್ಕೊಳಗಾಗಿದ್ದಳು ಎಂದು ಇತ್ತೀಚೆಗೆ ಬಹಿರಂಗಗೊಂಡಿದೆ. ಮಹಿಳೆ ಎದುರಿಸುತ್ತಿರುವ ಕಿರುಕುಳವನ್ನು ವಿವರಿಸುವ ಆಡಿಯೋ ರೆಕಾರ್ಡಿಂಗ್ಗಳು ಈಗ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಸುನೀಷಾ ಕುಟುಂಬವು ಪೊಲೀಸ್ ದೂರು ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದ್ದಾರೆ.
ಸುನೀಷಾ ಕೇವಲ ಒಂದೂವರೆ ವರ್ಷಗಳ ಹಿಂದೆ ಪಯ್ಯನೂರು ಮೂಲದ ವಿಜೀಶ್ ಅವರನ್ನು ವಿವಾಹವಾಗಿದ್ದರು.. ಸುನಿಷಾ ಕುಟುಂಬದ ಪ್ರಕಾರ, ಆಕೆ ತನ್ನ ಹಲವು ಬಾರಿ ಕರೆ ಮಾಡಿ ಗಂಡನ ಮನೆಯಲ್ಲಿ ಆಕೆ ಎದುರಿಸುತ್ತಿರುವ ಹಿಂಸೆಯ ಬಗ್ಗೆ ಹೇಳುತ್ತಿದ್ದಳು.
ಪತ್ನಿ ವಿಜೇಶ್ ತನ್ನ ದೇಹ ಕಪ್ಪು ಮತ್ತು ನೀಲಿಗಟ್ಟುವವರೆಗೆ ಹೊಡೆದು ಹಲ್ಲೆ ಮಾಡುತ್ತಿದ್ದ.ಅತ್ತೆ ಕೂದಲನ್ನು ಎಳೆದು ಹೊಡೆದು ವಿಜೇಶ್ ತಂದೆಯೂ ಹೆಲ್ಮೆಟ್ ನಿಂದ ಹೊಡೆದಿದ್ದಾರೆ ಎಂದು ಅವಲತ್ತುಕೊಳ್ಳುತ್ತಿದ್ದಳು. ಅಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ನಮಗೆ ಕರೆ ಮಾಡಿ ಹೇಳಿದ್ದಕ್ಕಾಗಿ, ಅವರು ಅವಳ ಫೋನ್ ಅನ್ನು ಕಿತ್ತುಕೊಂಡು ಹಾಳುಗೆಡವಿದ್ದರು. ಸುನೀಷಾಳನ್ನು ಅನೇಕ ಬಾರಿ ಮರಳಿ ಕರೆತರಲು ಹೋದರೂ ಆಕೆಯ ಪತಿ ವಿಜೀಶ್ ಆಕೆಯನ್ನು ಬಿಡುತ್ತಿರಲಿಲ್ಲ ಎಂದು ಸಂಬಂಧಿಕರೊಬ್ಬರು ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.