ಮುಂಬೈ, ಸೆ. 01 (DaijiworldNews/PY): ಪಾನಿಪುರಿ ವಿಷಯವಾಗಿ 23 ವರ್ಷದ ಗೃಹಿಣಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಪ್ರತಿಕ್ಷಾ ಸರವಾಡೆ (23) ಎಂದು ಗುರುತಿಸಲಾಗಿದೆ.
"ಬುಧವಾರ ಪತಿ, ಪತ್ನಿಗೆ ತಿಳಿಸದೇ ಪಾನಿಪುರಿ ತಂದಿದ್ದು, ತನಗೆ ಹೇಳದೇ ಪಾನಿಪುರಿ ತಂದಿದ್ದಕ್ಕಾಗಿ ಪ್ರತೀಕ್ಷಾ ಕೋಪಗೊಂಡು ಜಗಳ ಶುರು ಮಾಡಿದ್ದಳು. ಅದೇ ಕಾರಣಕ್ಕೆ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಪ್ರತೀಕ್ಷಾ ಸರ್ವಾಡೆ ಅವರಿಗೆ 2019ರಲ್ಲಿ ಅಂಬೇಗಾಂವ್ ನಿವಾಸಿ ಗಹಿನಿನಾಥ್ ಜೊತೆ ವಿವಾಹವಾಗಿತ್ತು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪರಸ್ಪರ ಕಿತ್ತಾಡಿಕೊಂಡ ಬಳಿಕ ಪ್ರತೀಕ್ಷಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.