ನವದೆಹಲಿ, ಸೆ 01(DaijiworldNews/MS): ಚೀನಾ, ಪಾಕಿಸ್ತಾನ ಮತ್ತು ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದ ಸಂಭಾವ್ಯ ಮೈತ್ರಿಯೂ ಆತಂಕಕ್ಕೆ ಕಾರಣವಾಗಿದೆ ಎಂದು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಪಿ.ಚಿದಂಬರಂ ಎಚ್ಚರಿಸಿದ್ದಾರೆ.
ಅಫ್ಘಾನಿಸ್ತಾನದ ಪ್ರದೇಶವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು ಅಥವಾ ಭಯೋತ್ಪಾದಕರಿಗೆ ಆಶ್ರಯ ನೀಡಲು ಬಳಸಬಾರದೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೊಂಡ ನಿರ್ಣಯದ ಬಗ್ಗೆ ಸಂಭ್ರಮಿಸಲು ಕಾಲ ಇನ್ನೂ ಪಕ್ವವಾಗಿಲ್ಲ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್ ಅವಧಿಗೆ ಭಾರತ ಅಧ್ಯಕ್ಷೀಯ ಸ್ಥಾನದಲ್ಲಿತ್ತು. ಅಫ್ಗಾನಿಸ್ತಾನದ ನೆಲವನ್ನು ಭಯೋತ್ಪಾದಕರಿಗೆ ಆಶ್ರಯ ನೀಡಲು ಅಥವಾ ಇತರ ದೇಶಗಳಿಗೆ ಬೆದರಿಕೆವೊಡ್ಡಲು ಬಳಸಬಾರದು ಎಂಬುದಾಗಿ ಮಂಡಳಿಯು ಇತ್ತೀಚೆಗೆ ನಿರ್ಣಯವನ್ನು ಅಂಗೀಕರಿಸಿದೆ. ಕೇಂದ್ರ ಇದಕ್ಕೆ ಸಂಭ್ರಮಿಸಿದ ವಿಚಾರವಾಗಿ ಟೀಕಿಸಿದ ಪಿ.ಚಿದಂಬರಂ "ರೆಸಲ್ಯೂಶನ್" ಗೆ ಎರಡು ಅರ್ಥಗಳಿವೆ. ಮೊದಲನೆಯದು ಸಮಸ್ಯೆಯನ್ನು 'ಪರಿಹರಿಸಲಾಗಿದೆ' ಅಥವಾ ಭಾರತದ ತೃಪ್ತಿಗಾಗಿ ಬಗೆಹರಿಸಲಾಗಿದೆ. ಯುಎನ್ಎಸ್ಸಿಯಲ್ಲಿ ನಡೆದದ್ದು ಎರಡನೆಯ ಅರ್ಥದಲ್ಲಿ. ಅದೆಂದರೆ ನಾವು ನಮ್ಮ ಇಚ್ಛೆಯನ್ನು ಕಾಗದದ ಮೇಲೆ ಇಟ್ಟಿದ್ದೇವೆ ಮತ್ತು ಇತರ ಕೆಲವರು ಆ ಕಾಗದಕ್ಕೆ ಸಹಿ ಹಾಕುವಂತೆ ಮಾಡಿದೆವು! ಯುಎನ್ ಎಸ್ ಸಿಯಲ್ಲಿ ನಿನ್ನೆ ನಡೆದದ್ದು ಇದೇ "ಎಂದು ಮಾಜಿ ಕೇಂದ್ರ ಸಚಿವರು ಟ್ವಿಟರ್ ನಲ್ಲಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂಥ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಗೆ ತಾನೇ ಅಭಿನಂದನೆ ಹೇಳಿಕೊಳ್ಳುತ್ತಿದೆ. ಇದು ಈಗ ಅಗತ್ಯ ಇಲ್ಲ ಇದು ತುಂಬಾ ಅಕಾಲಿಕವಾಗಿದೆ ಎಂದು ಪಿ.ಚಿದಂಬರಂ ಟೀಕಿಸಿದ್ದಾರೆ.