ಬೆಂಗಳೂರು, ಆ 31 (DaijiworldNews/PY): ರಾಜ್ಯದಲ್ಲಿಂದು ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 1217 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಸಾಂದರ್ಭಿಕ ಚಿತ್ರ
25 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 1198 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 2893715 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ತಿಳಿಸಿದೆ.
25 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಆ.31) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ದಕ್ಷಿಣ ಕನ್ನಡ-224, ಉಡುಪಿ-150, ಬೆಳಗಾವಿ-17, ಬೆಂಗಳೂರು ಗ್ರಾಮಾಂತರ-18, ಬೆಂಗಳೂರು ನಗರ-287, ಚಾಮರಾಜನಗರ-5, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-25, ಚಿತ್ರದುರ್ಗ-8, ದಾವಣಗೆರೆ-10, ಧಾರವಾಡ-9, ಗದಗ-1, ಹಾಸನ-56, ಹಾವೇರಿ-1, ಕಲಬುರ್ಗಿ-3, ಕೊಡಗು-89, ಕೋಲಾರ-55, ಕೊಪ್ಪಳ-1, ಮಂಡ್ಯ-11, ಮೈಸೂರು-127, ರಾಮನಗರ-6, ಶಿವಮೊಗ್ಗ-36, ತುಮಕೂರು-30, ಉತ್ತರ ಕನ್ನಡ-41, ವಿಜಯಪುರ-4, ಯಾದಗಿರಿ-1 ಪ್ರಕರಣ ವರದಿಯಾಗಿದೆ.