ಕೋಲ್ಕತ್ತ, ಆ.31 (DaijiworldNews/HR): ಸಿಬಿಐಯು ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರ ಕುರಿತು ತನಿಖೆ ಆರಂಭಿಸಿದ್ದು, ಎರಡು ಸ್ಥಳಗಳಲ್ಲಿ ಹೊಸದಾಗಿ ಮೂರು ಎಫ್ಐಆರ್ಗಳನ್ನು ದಾಖಲಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸಿಬಿಐ(ಸಾಂಧರ್ಭಿಕ ಚಿತ್ರ)
ಪೂರ್ವಮೇದಿನಿಪುರ ಜಿಲ್ಲೆಯ ನಂದಿಗ್ರಾಮ ಹಾಗೂ ಕೂಚ್ಬಿಹಾರ್ನ ಸೀತಾಲ್ಕುರ್ಚಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ ಹೊಸದಾಗಿ ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
ಇನ್ನು ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿ ಈ ವರೆಗೆ ಒಟ್ಟು 31 ಪ್ರಕರಣಗಳನ್ನು ದಾಖಲಿಸಲಾಗಿದೆ.