ಬೆಂಗಳೂರು, ಆ 31 (DaijiworldNews/PY): "ಕಳೆದ ಬಾರಿ ನೀವು ಪ್ರಕೃತಿ ಚಿಕಿತ್ಸೆಗೆ ಹೋದಾಗ ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ಇಟ್ಟಿದ್ದಿರಿ. ಭ್ರಷ್ಟಾಧ್ಯಕ್ಷರಿಗೆ ಖೆಡ್ಡಾ ತಯಾರಾಗಿದೆಯಾ?" ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಹತ್ತು ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆದು ಸ್ವಸ್ಥರಾಗಿ ಮರಳುತ್ತಿರುವ ಸಿದ್ದರಾಮಯ್ಯ ಅವರಿಗೆ ಸ್ವಾಗತ. ನಿಮ್ಮಅನುಪಸ್ಥಿತಿಯಿಂದ ಕಾಂಗ್ರೆಸ್ ಪಕ್ಷದ ಒಳಜಗಳ ರಂಗು ಕಳೆದುಕೊಂಡಿತ್ತು. ನಿಮ್ಮ ಭ್ರಷ್ಟಾಧ್ಯಕ್ಷರ ವಿರುದ್ಧ ಸೆಣೆಸುವುದಕ್ಕೆ ಯಾವ ರೀತಿ ಆಯುಧ ಹರಿತ ಮಾಡಿಕೊಂಡಿದ್ದೀರಿ ಎಂಬ ಕುತೂಹಲ ರಾಜ್ಯಕ್ಕಿದೆ, ತಿಳಿಸುವಿರಾ?" ಎಂದು ಕೇಳಿದೆ.
"ಮಾನ್ಯ ಸಿದ್ದರಾಮಯ್ಯ ಅವರೇ, ಕಳೆದ ಬಾರಿ ನೀವು ಪ್ರಕೃತಿ ಚಿಕಿತ್ಸೆಗೆ ಹೋದಾಗ ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ಇಟ್ಟಿದ್ದಿರಿ. ಆದರೆ ಈ ಬಾರಿ ನೀವು ಸದ್ದೇ ಮಾಡದೆ ರಹಸ್ಯ ಕಾರ್ಯಾಚರಣೆ ರೂಪಿಸಿರುವ ಹಾಗಿದೆ. ಭ್ರಷ್ಟಾಧ್ಯಕ್ಷರಿಗೆ ಖೆಡ್ಡಾ ತಯಾರಾಗಿದೆಯಾ?" ಎಂದು ಪ್ರಶ್ನಿಸಿದೆ.
ಆಗಸ್ಟ್ 10ರಂದು ಜಿಂದಾಲ್ಗೆ ತೆರಳಿದ್ದ ಸಿದ್ದರಾಮಯ್ಯ ಅವರು ಹತ್ತು ದಿನಗಳ ಕಾಲ ಸಂಪೂರ್ಣ ಚಿಕಿತ್ಸೆಗೆ ಒಳಗಾಗಿದ್ದರು. ಹತ್ತು ದಿನಗಳ ಪ್ರಕೃತಿ ಚಿಕಿತ್ಸೆಯ ನಂತರ ಮಂಗಳವಾರ ಮನೆಗೆ ಮರಳಿದ್ದಾರೆ.