ಬೆಂಗಳೂರು, ಆ 31 (DaijiworldNews/PY): "ಯಾರು ಯಾರ ಫ್ಯೂಸ್ ಕಿತ್ತು ಹಾಕಿದ್ದಾರೆ ಎಂದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಿಳಿಯುತ್ತದೆ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಹತ್ತು ದಿನಗಳ ಪ್ರಕೃತಿ ಚಿಕಿತ್ಸೆಯ ನಂತರ ಮಂಗಳವಾರ ಮನೆಗೆ ಮರಳಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ನ ಅಸಲಿ ಬಣ್ಣ ಬಯಲಾಗಿದೆ. ಯಾರು ಯಾರ ಫ್ಯೂಸ್ ಕಿತ್ತು ಹಾಕಿದ್ದಾರೆ ಎಂದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಿಳಿಯುತ್ತದೆ" ಎಂದು ಹೇಳಿದ್ದಾರೆ.
"ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ನನ್ನೊಂದಿಗೆ ಮಾತನಾಡಿದ್ದಾರೆ. ಅವರಿಗೆ ಹಾಗೂ ಅವರ ಮಗನಿಗೆ ಟಿಕೆಟ್ ಕೇಳಿರುವುದು ನಿಜ" ಎಂದಿದ್ದಾರೆ.
"ಅವರು ಯಾವ ಕ್ಷೇತ್ರ ಎಂದು ತಿಳಿಸಿಲ್ಲ. ನಾನು ಸುರ್ಜೆವಾಲ ಅವರೊಂದಿಗೆ ಮಾತನಾಡುತ್ತೇನೆ. ಆಪರೇಷನ್ ಜೆಡಿಎಸ್ ಬಗ್ಗೆ ತಿಳಿದಿಲ್ಲ. ಜಿಟಿಡಿ ಅವರನ್ನು ಬಿಟ್ಟರೆ ಬೇರೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ" ಎಂದು ತಿಳಿಸಿದ್ದಾರೆ.