ಬೆಳಗಾವಿ, ಆ.31 (DaijiworldNews/HR): "ಕಾಂಗ್ರೆಸ್ ಪಕ್ಷವು ಮುಸ್ಲಿಂ ನಾಯಕರು ಬೆಳೆಯಬಾರದೆಂದು ಬಯಸುತ್ತಿದ್ದು, ಭಾರತದ ಪ್ರಜಾಪ್ರಭುತ್ವದಲ್ಲಿ ಮುಸ್ಲಿಂರಿಗೆ ಅಧಿಕಾರದ ಹಕ್ಕು ಸಿಗಬೇಕು. ಅದಕ್ಕಾಗಿ ಚುನಾವಣೆ ಎದುರಿಸಿ ಗೆಲ್ಲಬೇಕು" ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರವು ಸಂಸತ್ನಲ್ಲಿ ಬಹಳಷ್ಟು ಕಾನೂನುಗಳಿಗೆ ಕಾಂಗ್ರೆಸ್ ಬೆಂಬಲಿಸುತ್ತದೆ. ಬಿಜೆಪಿಗೆ ಪ್ರತಿಯೊಂದು ಕಾನೂನು ರಚಿಸಲು ಕಾಂಗ್ರೆಸ್ ಪರೋಕ್ಷವಾಗಿ ಸಾಥ್ ಕೊಡುತ್ತಿದ್ದು, ಸಂಸತ್ನಲ್ಲಿ ಅನೇಕ ಸಲ ವಿರೋಧಿಸಿದ್ದೇನೆ. ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಹಕ್ಕಿದೆ. ಬೆಲೆ ಏರಿಕೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ" ಎಂದರು.
ಇನ್ನು ಮುಸ್ಲಿಮರು ರಾಜಕೀಯ ಹಕ್ಕು ಪಡೆದಾಗ ದೇಶ ಶಕ್ತಿಶಾಲಿಯಾಗಲಿದ್ದು, ದೇಶದಲ್ಲಿ ಮುಸ್ಲಿಂ ನಾಯಕರು ಯಾರಿದ್ದಾರೆ ಹೇಳಲಿ, ನಾನಂತೂ ಗಲ್ಲಿ ಲೀಡರ್. ನಾನು ಬೇಡ, ನನ್ನ ಬಿಟ್ಟು ಬೇರೆ ಯಾರು ಇದ್ದಾರೆ ಹೇಳಲಿ. ಮುಸ್ಲಿಂರನ್ನು ಹೊರತು ಪಡಿಸಿ ಎಲ್ಲ ಜಾತಿಯ ನಾಯಕರು ಇದ್ದಾರೆ" ಎಂದು ಹೇಳಿದ್ದಾರೆ.