ಬೆಂಗಳೂರು, ಆ.31 (DaijiworldNews/HR): ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಗೆಲ್ಲದಂತೆ ಮಾಡೋದೇ ಸಿದ್ದರಾಮಯ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷವು ಚುನಾವಣೆಗಳಲ್ಲಿ ಗೆಲ್ಲಬಾರದು ಎಂಬ ಸಂದೇಶವನ್ನ ಕೆಲವೊಮ್ಮೆ ನೇರವಾಗಿ ಹಾಗೂ ಇನ್ನೊಮ್ಮೆ ಹಿಂಬಾಲಕರ ಮೂಲಕ ಸಿದ್ದರಾಮಯ್ಯ ನೀಡಿದ್ದಾರೆ. ಈ ಬಾರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಗೆಲ್ಲದಂತೆ ಸಂದೇಶ ನೀಡಿದ್ದಾರೆ. ಈ ಹಿಂದೆ ಪರಮೇಶ್ವರ್ ಹಾಗೂ ಖರ್ಗೆಯನ್ನು ಸೋಲಿಸಲು ಸಿದ್ದರಾಮಯ್ಯ ಸಂದೇಶ ನೀಡಿದ್ದರು" ಎಂದರು.
ಇನ್ನು ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಖುರ್ಚಿಗೆ ನಾಲ್ಕೈದು ಮಂದಿ ನಾಯಕರು ಟವೆಲ್ ಹಾಕಿದ್ದು, ಪಕ್ಷವನ್ನು ಕಟ್ಟಲು ಆಗದವರಿಗೆ ಹಗಲುಗನಸು ಕಾಣುವ ನೈತಿಕತೆ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ" ಎಂದು ಹೇಳಿದ್ದಾರೆ.