ಅಲಿಬಾಗ್, ಆ 30 (DaijiworldNews/PY): "ಅನಾರೋಗ್ಯದ ಹಿನ್ನೆಲೆ ನಾರಾಯಣ ರಾಣೆ ಅವರಿಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ" ಎಂದು ನಾರಾಯಣ ರಾಣೆ ಪರ ವಕೀಲ ಸಂದೇಶ್ ಚಿಕ್ನೆ ಹೇಳಿದ್ದಾರೆ.
ನಾರಾಯಣ ರಾಣೆ ಪರ ವಕೀಲ ಸಂದೇಶ್ ಚಿಕ್ನೆ ಅವರು ಸ್ಥಳೀಯ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ದಯಾನಂದ ಗಾವಡೆ ಅವರ ಕಚೇರಿಗೆ ಹಾಜರಾಗಿದ್ದು, "ನಾರಾಯಣ ರಾಣೆ ಅವರ ಆರೋಗ್ಯ ಸರಿಯಿಲ್ಲ. ಈ ಹಿನ್ನೆಲ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ" ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಬಾರಿಸುತ್ತೇನೆ ಎಂದಿದ್ದ ನಾರಾಯಣ ರಾಣೆ ಅವರನ್ನ ಮಂಗಳವಾರ ಬಂಧಿಸಲಾಗಿತ್ತು. ಅವರನ್ನು ರಾತ್ರಿ ವೇಳೆಗೆ ಮಹಡ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು.
ರಾಣೆಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆ.30 ಹಾಗೂ ಸೆ.13ರಂದು ರಾಯಗಡದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹಾಜರಾಗುವಂತೆ ನಿರ್ದೇಶನ ನೀಡಿತ್ತು.