ಲಕ್ನೋ, ಆ. 30 (DaijiworldNews/HR): ಪೋಲಿಸ್ ಡ್ರೆಸ್ ಹಾಕಿ ಪ್ರಾಂಕ್ ವಿಡಿಯೋ ಮಾಡಿದ ಆರೋಪದ ಮೇಲೆ ಇಬ್ಬರು ಯೂಟ್ಯೂಬರ್ಗಳನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಗಳನ್ನು ಶಿವಂ ಯಾದವ್ ಮತ್ತು ಆತನ ಸ್ನೇಹಿತ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಬ್ಬರು ಪೊಲೀಸ್ ಅಧಿಕಾರಿಗಳಂತೆ ನಟಿಸುತ್ತಿದ್ದು, ಮತ್ತು ಬರೇಲಿ ಕ್ಯಾಂಟ್ನ ಮದರಿ ಕಿ ಪುಲಿಯಾ ಪ್ರದೇಶವನ್ನು ಹಾದುಹೋಗುವ ವಾಹನಗಳನ್ನು ಪರಿಶೀಲಿಸುತ್ತಿದ್ದರು ಎನ್ನಲಾಗಿದೆ.
ಇಬ್ಬರೂ ರಸ್ತೆಯ ಮೂಲಕ ಹಾದುಹೋಗುವ ವಾಹನಗಳನ್ನು ಪರಿಶೀಲಿಸಿ ಮಾಸ್ಕ್ ಇಲ್ಲದೇ ಕಂಡುಬರುವವರ ವಿರುದ್ಧ ಕ್ರಮಕ್ಕೆ ಬೆದರಿಕೆ ಹಾಕುತ್ತಿದ್ದರು. ಸಂಚಾರ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಚಲನ್ ನೀಡುವುದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ.
ಪೋಲಿಸ್ ವೇಷ ಧರಿಸಿದ ಇಬ್ಬರು ಯೂಟೂಬರ್ ಗಳು ರಸ್ತೆಯಲ್ಲಿ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದ್ದು, ನಾವು ಸ್ಥಳಕ್ಕೆ ಹೋಗಿ ಅವರನ್ನು ಬಂಧಿಸಿದ್ದು, ವಿಚಾರಣೆಯ ಸಮಯದಲ್ಲಿ, ಅವರು ತಮ್ಮ ಯೂಟ್ಯೂಬ್ ಚಾನೆಲ್ಗಾಗಿ ತಮಾಷೆಯ ವೀಡಿಯೊಗಳನ್ನು ಚಿತ್ರೀಕರಿಸುತ್ತಿರುವುದಾಗಿ ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ವಂಚನೆ ಮತ್ತು ಸಾರ್ವಜನಿಕ ಸೇವಕನ ಉಡುಪನ್ನು ಧರಿಸಿದ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.